ತಿರುವನಂತಪುರಂ: 250 ರೂ. ಸಾಲ ಪಡೆದು ಲಾಟರಿ ಟಿಕೆಟ್ ಖರೀದಿಸಿದ ಕೇರಳದ (Kerala) 11 ಪೌರಕಾರ್ಮಿಕ ಮಹಿಳೆಯರ ಅದೃಷ್ಟ ಖುಲಾಯಿಸಿದೆ. ಕೇರಳ ಲಾಟರಿ ಇಲಾಖೆ (Kerala Lottery) ನಡೆಸುವ ಡ್ರಾನಲ್ಲಿ 10 ಕೋಟಿ ರೂ. ಬಹುಮಾನ ಈ ಮಹಿಳೆಯರ ಪಾಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆಯರು (Women), ನಾವೆಲ್ಲರೂ ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೆಟ್ಗಳನ್ನು ಖರೀದಿಸಿದ್ದೆವು. ಇದೇ ಮೊದಲ ಬಾರಿಗೆ ನಾವು ಗೆದ್ದಿದ್ದೇವೆ. ಬಹುಮಾನ ಗೆಲ್ಲುತ್ತೇವೆ ಎಂದು ಕನಸಲ್ಲೂ ಊಹಿಸಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮನೆ ಬಾಗಿಲು ಮುರಿದು ಬಂದೂಕು ಕದ್ದ ಕಳ್ಳರು
Advertisement
Advertisement
ನಮ್ಮ ಟಿಕೆಟ್ಗೆ ಬಹುಮಾನ ಬಂದಿರುವುದು ತಿಳಿದಾಗ ಖುಷಿಯಾಯಿತು. ನಮಗೆ ವೇತನ ಹೊರತುಪಡಿಸಿ ಯಾವುದೇ ಆದಾಯ ಮೂಲಗಳಿಲ್ಲ. ನಾವೆಲ್ಲರೂ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಹಣ ಸಹಕಾರವಾಗಲಿದೆ ಎಂದು ಮತ್ತೋರ್ವ ಮಹಿಳೆ ತಿಳಿಸಿದ್ದಾರೆ.
Advertisement
Advertisement
ನಗರಸಭೆಯ ಹರಿತ ಕರ್ಮ ಸೇನೆ (Haritha Karma Sena) ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, ಈ ಬಾರಿ ಅತ್ಯಂತ ಅರ್ಹರಿಗೆ ಅದೃಷ್ಟ ಒಲಿದು ಬಂದಿದೆ. ಎಲ್ಲಾ ವಿಜೇತರು ಶ್ರಮಜೀವಿಗಳಾಗಿದ್ದಾರೆ. ಅವರೆಲ್ಲ ಹೆಚ್ಚಾಗಿ ಸಾಲದಲ್ಲಿದ್ದಾರೆ. ಅಲ್ಲದೇ ಮದುವೆಗೆ ಬಂದಿರುವ ಹೆಣ್ಣುಮಕ್ಕಳಿದ್ದಾರೆ. ಕೆಲವರು ಅವರ ಕುಟುಂಬಸ್ಥರ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಿಸಬೇಕಿದೆ. ಅವರ ಮನೆಗಳು ಭದ್ರವಾಗಿಲ್ಲ. ಅಂಥವರಿಗೆ ಈ ಲಾಟರಿ ಒಲಿದಿರುವುದು ಖುಷಿ ನೀಡಿದೆ ಎಂದಿದ್ದಾರೆ.
ಲಾಟರಿ ವಿಜೇತ ಮಹಿಳೆಯರನ್ನು ಭೇಟಿ ಮಾಡಿ ಹಲವಾರು ಜನ ಅಭಿನಂದಿಸಿದ್ದಾರೆ. ಶ್ರಮಜೀವಿಗಳಿಗೆ ಒಲಿದ ಅದೃಷ್ಟಕ್ಕೆ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಬಸವಸಾಗರ ಜಲಾಶಯ ಭರ್ತಿ – ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ರಿಲೀಸ್
Web Stories