CrimeLatestNational

ವಿಮಾನ ಪ್ರಯಾಣದ ವೇಳೆ ಉಸಿರಾಟದ ತೊಂದರೆ – 11 ತಿಂಗಳ ಮಗು ಸಾವು

Advertisements

ಹೈದರಾಬಾದ್: ವಿಮಾನ ಪ್ರಯಾಣದ ವೇಳೆ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ 11 ತಿಂಗಳ ಮಗುವನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಮೃತ್ತಪಟ್ಟ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಅಮೆರಿಕಾದ ಅರ್ನವ್ ವರ್ಮಾ ಅಲ್ಲೂರಿ ಮೃತಪಟ್ಟ ಮಗು. ಅರ್ನವ್ ತನ್ನ ಪೋಷಕರ ಜೊತೆಗೆ ಕತಾರ್ ದೇಶದ ರಾಜಧಾನಿ ದೋಹಾದಿಂದ ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದ್ದ. ಪ್ರಯಾಣದ ವೇಳೆ ಅರ್ನವ್‍ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಹೈದರಾಬಾದ್ ನಿಲ್ದಾಣಕ್ಕೆ ವಿಮಾನ ಬಂದು ನಿಲ್ಲುತ್ತಿದ್ದಂತೆ ಅರ್ನವ್‍ನನ್ನು ಸಮೀಪದ ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯೆ ಅರ್ನವ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಅರ್ನವ್ ರಾತ್ರಿ 2.29ಕ್ಕೆ ಮೃತಪಟ್ಟಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ಬಳಿಕ ವೈದ್ಯರು ತಿಳಿಸಿದ್ದಾರೆ. ನ್ಯೂಜೆರ್ಸಿಯಲ್ಲಿ ಕಳೆದ ವರ್ಷದ ಅಕ್ಟೋಬರ್‍ನಲ್ಲಿ ಅರ್ನವ್ ಜನಿಸಿದ್ದ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Leave a Reply

Your email address will not be published.

Back to top button