ಗಾಂಧೀನಗರ: ಗುಜರಾತ್‌ನ ವಡೋದರಾ (Vadodara) ಜಿಲ್ಲೆಯಲ್ಲಿ ಬುಧವಾರ ಮುಂಜಾನೆ 43 ವರ್ಷದ ಹಳೆಯ ಸೇತುವೆ ಕುಸಿದು (Bridge Collapse) ಬಿದ್ದು ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಸೇತುವೆ ಕುಸಿದು ಮಹಿಸಾಗರ್ ನದಿಗೆ ಹಲವಾರು ವಾಹನಗಳು ಉರುಳಿ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗುಜರಾತ್| ಮಧ್ಯದಲ್ಲೇ ಕುಸಿದ ಸೇತುವೆ – 5 ವಾಹನಗಳು ನದಿಗೆ, 8 ಸಾವು
ಸೇತುವೆ ಕುಸಿದು ಮೃತಪಟ್ಟವರಲ್ಲಿ ರಮೇಶ್ ಪಡಿಯಾರ್, ವೇದಿಕಾ ಪಡಿಯಾರ್, ಮತ್ತು ದರಿಯಾಪುರ ಗ್ರಾಮದ ನೈತಾಯಿಕ್ ಪಾಧಿಯಾರ್, ಮಜತಾನ್‌ನ ಹಸ್ಮುಖ್ ಪರ್ಮಾರ್, ಕಹನ್ವಾ ಗ್ರಾಮದ ವಖತ್ಸಿನ್ಹ್ ಜಾದವ್ ಮತ್ತು ಉಂದೆಲ್ ಗ್ರಾಮದ ಪ್ರವೀಣ್ ಜಾದವ್ ಗುರುತು ಪತ್ತೆಹಚ್ಚಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ, ನದಿಗೆ ಬಿದ್ದವರ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಮೂವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ವಡೋದರಾದ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಭಾರತದ ಹಲವು ರಾಜ್ಯಗಳಿಗೆ ಪ್ರವಾಹ ಎಚ್ಚರಿಕೆ – ಹಿಮಾಚಲ ಪ್ರದೇಶದಲ್ಲಿ ಯೆಲ್ಲೋ ಅಲರ್ಟ್
ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಪೊಲೀಸರು ತನಿಖೆ ಆರಂಭಿಸಲಿದ್ದಾರೆ ಎಂದು ವಡೋದರಾ ಎಸ್ಪಿ ತಿಳಿಸಿದ್ದಾರೆ. ನಾವು ಜಿಲ್ಲಾಧಿಕಾರಿಗಳಿಂದ ವಿಚಾರಣಾ ವರದಿಯನ್ನು ಸಹ ಪಡೆಯುತ್ತೇವೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಪದ್ರಾ ರೆಫರಲ್ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ಹೇಳಿದ್ದಾರೆ.
ವಡೋದರಾ ಜಿಲ್ಲೆಯ ಪದ್ರಾ ತಾಲ್ಲೂಕಿನ ಮುಜ್‌ಪುರದಲ್ಲಿರುವ ಈ ಸೇತುವೆ, ಮುಜ್‌ಪುರವನ್ನು ಆನಂದ್ ಜಿಲ್ಲೆಯ ಗಂಭೀರಾಗೆ ಹಾಗೂ ಮಧ್ಯ ಗುಜರಾತ್‌ನಿಂದ ಸೌರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ.