ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲೂ ಕೇವಲ ಅರ್ಧ ಅಡಿಯಷ್ಟು ಮಾತ್ರ ಬಾಕಿ ಇದೆ. ಈ ಹಿನ್ನೆಲೆ ಡ್ಯಾಮಿನ 11 ಗೇಟ್‍ಗಳನ್ನು ತೆರೆಯಲಾಗಿದ್ದು, ಜೋಗ ಜಲಪಾತದ ವೈಭವ ಜೋರಾಗಿದೆ.
ಲಿಂಗನಮಕ್ಕಿ ಜಲಾಶಯದ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಕಾರಣಕ್ಕೆ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಲಿಂಗನಮಕ್ಕಿ ಡ್ಯಾಮ್ ಭರ್ತಿಗೆ ಅರ್ಧ ಅಡಿಯಷ್ಟೇ ಬಾಕಿ ಇದೆ. ಆದ್ದರಿಂದ ಜಲಾಶಯದ 11 ಗೇಟ್‍ಗಳನ್ನು ತೆರೆಯಲಾಗಿದೆ. ಜಲಾಶಯ ಗರಿಷ್ಠ ಮಟ್ಟ 1,819 ಅಡಿಯಷ್ಟಿದ್ದು, ಸದ್ಯ 1,818.50 ಅಡಿಯಷ್ಟು ನೀರು ಭರ್ತಿಯಾಗಿದೆ. ಇದರಿಂದ ಜಲಾಶಯದಿಂದ 10,508 ಕ್ಯೂಸೆಕ್ ನೀರನ್ನು ಜಲಾಶಯದಿಂದ ನದಿಗೆ ಹರಿಯಬಿಡಲಾಗುತ್ತಿದೆ.
Advertisement
Advertisement
ಜಲಾಶಯದ ನೀರು ಹೊರಬಿಟ್ಟ ಕಾರಣಕ್ಕೆ ಜೋಗ ವೈಭವ ಹೆಚ್ಚಾಗಿದೆ. ಮೈದುಂಬಿ ಧುಮುಕುತ್ತಿರುವ ಜೋಗದ ನೀರನ್ನು ನೋಡಿ ಪ್ರವಾಸಿಗರು ಫಿದಾ ಆಗಿದ್ದಾರೆ. ಜಲಪಾತದಲ್ಲಿ ನೀರು ಹರಿಯುತ್ತಿರುವ ಪರಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಪ್ರಕೃತಿ ಮಡಿಲಿನ ಈ ಅಮೋಘ ಜೋಗದ ದೃಶ್ಯಕಾವ್ಯ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.