– ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವವರ ಬೇಟೆಗಿಳಿದ ಯೋಗಿ ಸರ್ಕಾರ
ಲಕ್ನೋ: ಉತ್ತರ ಪ್ರದೇಶದಲ್ಲಿ `ಆಪರೇಷನ್ ಬುಲ್ಡೋಜರ್’ ಬಳಿಕ ಈಗ `ಆಪರೇಷನ್ ಲಂಗ್ಡಾ’ (Operation Langda) ಸದ್ದು ಮಾಡಿದೆ. ರಾಜ್ಯದಲ್ಲಿ ಕ್ರಿಮಿನಲ್‌ಗಳು, ರೇಪಿಸ್ಟ್‌ಗಳು, ಕೊಲೆಗಾರರು, ದರೋಡೆಕೋರರ ವಿರುದ್ಧ ಸಮರ ಸಾರಿರುವ ಉತ್ತರ ಪ್ರದೇಶ ಪೊಲೀಸರು 8 ನಗರಗಳಲ್ಲಿ 24 ಗಂಟೆಯಲ್ಲಿ 11 ಜನರಿಗೆ ಗುಂಡೇಟು ಹೊಡೆದಿದ್ದಾರೆ.
ಅಪರಾಧ ಕೃತ್ಯ ನಿಯಂತ್ರಣಕ್ಕೆ ಪೊಲೀಸರು ಆರಂಭಿಸಿರುವ ವಿಶೇಷ ಕಾರ್ಯಾಚರಣೇಯೇ ಆಪರೇಷನ್ ಲಂಗ್ಡಾ. ಪದೇ ಪದೇ ಅಪರಾಧ ಕೃತ್ಯ ಎಸಗುವವರು, ಕ್ರಿಮಿನಲ್‌ಗಳು, ರೌಡಿಗಳು, ಪರೋಡಿಗಳಿಗೆ ಗುಂಡೇಟು ಹೊಡೆಯುವ ಮೂಲಕ ಪೊಲೀಸರು ಭೀತಿ ಹುಟ್ಟಿಸಿದ್ದಾರೆ. ಆಪರೇಷನ್ ಲಂಗ್ಡಾ ಕಾರ್ಯಾಚರಣೆಯಲ್ಲಿ ಕ್ರಿಮಿನಲ್ಸ್‌ಗಳನ್ನು ಕೊಲ್ಲುವುದಿಲ್ಲ. ಬದಲಿಗೆ ಅವರ ಕಾಲಿಗೆ ಗುಂಡೇಟು ಹೊಡೆದು ಅರೆಸ್ಟ್ ಮಾಡಲಾಗುತ್ತದೆ. ಇದನ್ನೂ ಓದಿ: Hassan | ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು
ಬಂಧಿತರೆಲ್ಲರೂ ಉತ್ತರ ಪ್ರದೇಶ ಪೊಲೀಸರ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವವರೇ ಆಗಿದ್ದಾರೆ. ಈ ಎನ್‌ಕೌಂಟರ್ ವೇಳೆ ಕೆಲ ಕ್ರಿಮಿನಲ್‌ಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ವಿದೇಶಕ್ಕೆ ಶೂಟಿಂಗ್‌ಗೆ ತೆರಳಲು ಅನುಮತಿ ಕೋರಿ ದರ್ಶನ್ ಅರ್ಜಿ – ಮೇ 30ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
ಗುಂಡೇಟು ತಿಂದವರು ಯಾರು?
* ಲಖನೌದಲ್ಲಿ ರೇಪ್ ಆರೋಪಿ.
* ಘಾಜಿಯಾಬಾದ್‌ನಲ್ಲಿ ಕೊಲೆಗಾರ.
* ಶಾಮ್ಲಿಯಲ್ಲಿ ಗೋವು ಅಕ್ರಮ ಸಾಗಾಟಗಾರ.
* ಝಾನ್ಸಿಯಲ್ಲಿ ಕ್ರಿಮಿನಲ್.
* ಬುಲಂದ್‌ಶಹರ್‌ನಲ್ಲಿ ಅತ್ಯಾಚಾರಿ.
* ಬಾಘಪತ್‌ನಲ್ಲಿ ದರೋಡೆಕೋರ.
* ಬಲಿಯಾದಲ್ಲಿ ಎಸ್ಕೇಪ್ ಆಗ್ತಿದ್ದ ಕ್ರಿಮಿನಲ್.
* ಆಗ್ರಾದಲ್ಲಿ ಕಳ್ಳ.
* ಜಲೌನ್‌ನಲ್ಲಿ ದರೋಡೆಕೋರ.
* ಉನ್ನಾವೋದಲ್ಲಿ ರೌಡಿಶೀಟರ್.