ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಒಂದೇ ದಿನ 11 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ.
ಪತ್ತೆಯಾದ ಈ 11 ಪ್ರಕರಣದಲ್ಲಿ 5 ಪ್ರಕರಣ ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರ ನಿವಾಸಿಗಳದ್ದಾಗಿದೆ. ಈಗಾಗಲೇ ಅವರನ್ನು ಐಸೋಲೇಷನ್ ಗೆ ಶಿಫ್ಟ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ರಾಮನಗರದಲ್ಲಿರುವ ಕ್ವಾರಂಟೈನ್ ಮಾಡಿರುವವರನ್ನು ಸರ್ಕಾರದ ತೀರ್ಮಾನದಂತೆ ಹಜ್ ಭವನಕ್ಕೆ ಕರೆತರಲಾಗಿದೆ. ಇತ್ತ ಹೊಂಗಸಂದ್ರದಲ್ಲಿ 5 ಜನರ ವರದಿ ಪಾಸಿಟಿವ್ ಬಂದಿದೆ. ಇವರು ಬಿಹಾರಿ ಕೂಲಿ ಕಾರ್ಮಿಕನ ಪ್ರಾಥಮಿಕ ಸಂಪರ್ಕದಲ್ಲಿದ್ದವರಾಗಿದ್ದಾರೆ ಎಂದರು.
Advertisement
49 ವರ್ಷದ ಮಹಿಳೆಯೊಬ್ಬರಿಗೆ ಕೂಡ ಕೊರೊನಾ ಪಾಸಿಟಿವ್ ಬಂದಿದ್ದು, ಅವರಿಗೆ ಹೇಗೆ ಕೊರೊನಾ ಬಂದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ರಾಜ್ಯದಲ್ಲಿ ಇಂದು 18 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 463ಕ್ಕೆ ಏರಿಕೆಯಾಗಿದೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಇಬ್ಬರಿಗೆ, ವಿಜಯಪುರದ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದ 453 ಸೋಂಕಿತರ ಪೈಕಿ ಈವರೆಗೂ 18 ಜನರು ಮೃತಪಟ್ಟಿದ್ದರೆ, 150 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 18 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 463ಕ್ಕೆ ಏರಿದೆ. #ಮನೆಯಲ್ಲೇಇರಿ pic.twitter.com/4y9s76xEVE
— B Sriramulu (@sriramulubjp) April 24, 2020