ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಉಗ್ರಪ್ಪ ವಿರುದ್ಧ ಕೈ ಶಾಸಕರು ಕೆಂಡಾಮಂಡಲರಾಗಿದ್ದಾರೆ.
ಉಗ್ರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ 11 ಕಾಂಗ್ರೆಸ್ ಶಾಸಕರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ. ಸಭಾಪತಿ ವಿರುದ್ಧ ಕೆಲವರು ಚಿತಾವಣೆಯಿಂದ ಅವಿಶ್ವಾಸ ನಿರ್ಣಯ ಮಂಡಿಸಿದ್ರು. ಇದಕ್ಕೆ ಮೂಲ ಕಾರಣರಾಗಿರುವ ಉಗ್ರಪ್ಪ, ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Advertisement
ಶಾಸಕರಾದ ಎಸ್.ಟಿ.ಸೋಮಶೇಖರ್, ಕೆ.ಎನ್.ರಾಜಣ್ಣ, ಶಿವಮೂರ್ತಿ ನಾಯಕ್, ಶಾಂತನಗೌಡ ಸೇರಿದಂತೆ 11 ಮಂದಿಯಿಂದ ದೂರು ನೀಡಲಾಗಿದೆ.
Advertisement
Advertisement
ಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸಲು ಮುಂದಾಗಿದ್ದ ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದೆ. ನಿರ್ಣಯದ ಪರವಾಗಿ 36 ಮತಗಳು ಬಿದ್ದಿದ್ದರೆ, ನಿರ್ಣಯದ ವಿರುದ್ಧವಾಗಿ 37 ಮತಗಳು ಬಿದ್ದ ಪರಿಣಾಮ ಸಭಾಪತಿ ವಿರುದ್ಧ ಕಾಂಗ್ರೆಸ್‍ನ ಅವಿಶ್ವಾಸ ನಿರ್ಣಯ ತಿರಸ್ಕೃತವಾಗಿದೆ. ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಜೆಡಿಎಸ್ ಬೆಂಬಲಿಸದ ಕಾರಣ ಶಂಕರಮೂರ್ತಿ ಸಭಾಪತಿಗಳಾಗಿ ಮುಂದುವರೆದಿದ್ದಾರೆ.