– ಚಾರ್ಮಾಡಿಯ ಮೃತ್ಯುಂಜಯ ನದಿಯಲ್ಲಿ ತ್ಯಾಜ್ಯ
ಮಂಗಳೂರು: ಧರ್ಮಸ್ಥಳದ (Dharmasthala) ಸ್ನಾನಘಟ್ಟವನ್ನು ಅಪವಿತ್ರಗೊಳಿಸಲು ಕೆಲ ಕಿಡಿಗೇಡಿಗಳು ಪ್ರಯತ್ನ ನಡೆಸಿದ್ದಾರೆ.
Advertisement
ನೇತ್ರಾವತಿ ನದಿಯನ್ನು (Netravati River) ಸೇರುವ ಚಾರ್ಮಾಡಿಯ (Charmadi) ಮೃತ್ಯುಂಜಯ ನದಿಗೆ (Mrityunjaya River) ಕಿಡಿಗೇಡಿಗಳು ಗೋಮಾಂಸದ (Beef) ತ್ಯಾಜ್ಯವನ್ನು ಸುರಿದಿದ್ದಾರೆ. ನದಿಯಲ್ಲಿ ದನದ ಚರ್ಮ, ಕೊಂಬು, ಇತ್ಯಾದಿ ತ್ಯಾಜ್ಯ ಹೊಂದಿರುವ 11 ಗೋಣಿಗಳು ಪತ್ತೆಯಾಗಿದೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ವಿರುದ್ಧ ಚಿಕ್ಕಮಗಳೂರಿನಲ್ಲಿ ಕೇಸ್, ತರೀಕೆರೆಯಲ್ಲಿ ವಿಚಾರಣೆ!
Advertisement
Advertisement
ನೇತ್ರಾವತಿ ನದಿ ಸೇರುವ ಮೃತ್ಯುಂಜಯ ನದಿ ನೀರಿನಲ್ಲಿಯೇ ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳು ಸ್ನಾನ ಮಾಡುತ್ತಾರೆ. ಇಂತಹ ನೀರಲ್ಲಿ ಈ ಕೃತ್ಯ ಎಸಗಿರುವುದು ಸಾಕಷ್ಟು ಅನುಮಾನ, ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಧಾರ್ಮಿಕ ಕ್ಷೇತ್ರವನ್ನು ಅಪವಿತ್ರ ಮಾಡಬೇಕು ಎನ್ನುವುದು ದುಷ್ಟ ಮನಸ್ಥಿತಿಗಳ ಹುನ್ನಾರ. ಇದು ಮತಾಂಧತೆಯನ್ನು ತೋರಿಸುತ್ತದೆ ಎಂದು ಬಿಜೆಪಿಯ ಪರಿಷತ್ ಸದಸ್ಯ ಸಿಟಿ ರವಿ ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಇದ್ಯೋ?.ಇಲ್ವೋ ಎಂದು ಪ್ರಶ್ನೆ ಮಾಡಿದ್ದಾರೆ.