ನವದೆಹಲಿ: ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರು ಅಫ್ಘಾನಿಸ್ಥಾನದವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಬರೋಬ್ಬರಿ 11.44 ಕೋಟಿ ರೂ. ಬೆಲೆಯ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಡಿ.25ರಂದು ದುಬೈನಿಂದ ಆಗಮಿಸಿದ್ದರು. ಒಟ್ಟು 208 ಕ್ಯಾಪ್ಸಲ್ಸ್ ಗಳಲ್ಲಿ 1.635 ಕೆ.ಜಿ. ಹೆರಾಯಿನ್ ರೂಪದ ಡ್ರಗ್ಸ್ ನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 11.44 ಕೋಟಿ ರೂ. ಆಗಿದೆ ಎಂದು ಅಂದಾಜಿಸಲಾಗಿದೆ.
ನಾರ್ಕೋಟಿಕ್ ಡ್ರಗ್ಸ್ ಹಾಗೂ ಸೈಕೋಟ್ರೋಪಿಕ್ ಸಬ್‍ಸ್ಟೇನ್ಸಸ್ ಆಕ್ಟ್-1985 ಅಡಿ ಪ್ರಕರಣ ದಾಖಲಾಗಿದ್ದು, ಜನವರಿ 25ರಂದು ಇಕೆ 512 ವಿಮಾನದಲ್ಲಿ ಆಗಮಿಸಿದ ಇಬ್ಬರು ಅಫ್ಘಾನಿಸ್ಥಾನದವರನ್ನು ದೆಹಲಿ ಕಸ್ಟಮ್ಸ್ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 208 ಕ್ಯಾಪ್ಸಲ್ಸ್ ಒಟ್ಟು 1,635 ಗ್ರಾಂ. ವೈಟ್ ಪೌಡರ್ ರೀತಿಯ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.