ಹೈದರಾಬಾದ್: ಕೊರೊನಾ ಸೋಂಕಿತ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ಜಾಗವಿಲ್ಲದೇ ಮರವನ್ನೇರಿ ಕುಳಿತು 11 ದಿನ ಅಲ್ಲಿಯೇ ಐಸೋಲೇಷನ್ ಅಗಿರುವ ಘಟನೆ ನಡೆದಿದೆ.
ತೆಲಂಗಾಣ ನಲಗೊಂಡ ಜಿಲ್ಲೆಯ ಕೊತಾನಂದಿಕೊಂಡ ಗ್ರಾಮದಲ್ಲಿ ವಾಸವಾಗಿರುವ ಶಿವ 11 ದಿನಗಳಿಂದ ಮರದ ಮೇಲೆಯೇ ಕುಳಿತ್ತಿದ್ದಾನೆ. ಈತನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮನೆಯವರಿಗೆ ಹರಡಬಾರದು ಎಂದು ಪ್ರತ್ಯೇಕವಾಗಿ ಹೋಂ ಐಸೋಲೇಷನ್‍ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಇರುವ ಚಿಕ್ಕ ಮನೆಯಲ್ಲಿ ಪ್ರತ್ಯೇಕವಾಗಿರುವುದು ಕಷ್ಟ ಎಂದು ಬಾಲಕ ಮರವನ್ನೇರಿ ಕುಳಿತಿದ್ದಾನೆ.
ಮನೆಯಲ್ಲಿ ಜಾಗವಿಲ್ಲದೇ, ಐಸೋಲೇಷನ್ ಸೆಂಟರ್‌ಗಳೂ ಇಲ್ಲದ ಊರುಗಳ ಜನರ ಸ್ಥಿತಿ ಇದೇ ಆಗಿದೆ. ನಮ್ಮಲ್ಲಿ ಯಾವುದೇ ಐಸೋಲೇಷನ್ ಸೆಂಟರ್‌ಗಳೂ ಇಲ್ಲ. ಇರುವುದಕ್ಕೆ ಚಿಕ್ಕ ಮನೆ. ಅಲ್ಲಿ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ಕುಟುಂಬದ ಸದಸ್ಯರು ಜೊತೆಗೆ ಇದ್ದರೆ ಸೋಂಕು ಹರಡುತ್ತದೆ ಎನ್ನುವ ಭಯವಿತ್ತು. ಆದ್ದರಿಂದ ನಾನು ಮರದ ಮೇಲೆ ಕುಳಿತು 11 ದಿನ ಕಾಲ ಕಳೆದಿದ್ದೇನೆ. ಗ್ರಾಮದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾದರೆ 5 ಕಿ.ಮೀ ಹೋಗಬೇಕು. ತುರ್ತು ಚಿಕಿತ್ಸೆಗಾಗಿ 30 ಕಿಮೀ ಹೋಗಬೇಕಾಗಿರುವ ಪರಿಸ್ಥಿತಿ ಇದೆ ಎಂದು ಬಾಲಕ ಶಿವ ಹೇಳಿದ್ದಾನೆ.