ಬೀಜಿಂಗ್: ಭಾರತದ ಸೇರಿ ಹಲವು ದೇಶಗಳು ಇದೀಗ 5ಜಿ ನೆಟ್‌ವರ್ಕ್ ಪರಿಚಯಿಸಿದರೆ, ಚೀನಾವು ಈಗ ವಿಶ್ವದ ಮೊದಲ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಪರಿಚಯಿಸಿದೆ.
ಚೀನಾ (China) ಹಾಗೂ ಹುವೈ ಯುನಿಕಾರ್ನ್ ಜೊತೆ ಜಂಟಿಯಾಗಿ 10ಜಿ 10ಜಿ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಚೀನಾದ ಹೆಬೈ ಪ್ರಾಂತ್ಯದ ಸುನನ್ ಕೌಂಟಿಯಲ್ಲಿ ಕಾರ್ಯಗತಗೊಳಿಸಿದೆ. ಇದನ್ನೂ ಓದಿ: ನಿವೃತ್ತ ಡಿಜಿಪಿ ಬರ್ಬರ ಹತ್ಯೆ – ತಂಗಿಯರಿಗೆ ಆಸ್ತಿ ಕೊಟ್ಟಿದ್ದಕ್ಕೆ ನಡೀತಾ ಕೊಲೆ?
ಭಾರತ (India) ಸೇರಿ ಇತರೆ ದೇಶಗಳು 100 ಎಂಬಿಪಿಎಸ್ ವೇಗದಲ್ಲಿರುವಾಗ, ಚೀನಾ ಕಂಪನಿಗಳು ಇದರಿಂದ 10 ಪಟ್ಟು ವೇಗವನ್ನು ಹೊಂದಿರುವ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಜಾರಿಗೊಳಿಸಿದೆ. 2 ಗಂಟೆಗಳ ಫಿಲ್ಮ್‌ಗಳು ಕೇವಲ 1 ನಿಮಿಷದಲ್ಲಿ ಮಾಡಬಹುದು. ಇದನ್ನೂ ಓದಿ: ಕೋಟಿ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ ಮಂಗಳಮುಖಿಯ ಬರ್ಬರ ಹತ್ಯೆ – ಪತಿ, ಮನೆಗೆಲಸದಾಕೆ ಪರಾರಿ
ಹೆಬೈ ಪ್ರಾಂತ್ಯದಲ್ಲಿ ಪರಿಚಯಿಸಲ್ಪಟ್ಟಿರುವ ವಿಶ್ವದ ಮೊದಲ 50ಜಿ ಪಿಒಎನ್ ಸೊಲ್ಯೂಷನ್ಸ್ ಅಡಿ ನಿರ್ಮಿಸಲ್ಪಟ್ಟ ಈ ಬ್ರಾಡ್ ಬ್ಯಾಂಡ್ ಮೂಲಸೌಲಭ್ಯ 9,834 ಎಂಬಿಪಿಎಸ್ ಡೌನ್‌ಲೋಡ್ ಸ್ಟೀಡ್ ಹೊಂದಿದೆ. ಇದು 1,008 ಎಂಬಿಪಿಎಸ್ ಸ್ಪೀಡ್‌ನಲ್ಲಿ ಅಪ್‌ಲೋಡ್ ಮಾಡುತ್ತದೆ. ಇದನ್ನೂ ಓದಿ: ನಿವೃತ್ತ IPS ಅಧಿಕಾರಿಗೆ 10 ಬಾರಿ ಚಾಕುವಿನಿಂದ ಇರಿದು ಕೊಂದ ಪತ್ನಿ; 15 ನಿಮಿಷ ನರಳಿ ಪ್ರಾಣಬಿಟ್ಟ ಓಂ ಪ್ರಕಾಶ್
ಅಲ್ಲದೇ 900 ಜಿಬಿಯಷ್ಟು ಭಾರಿ ಫೈಲ್ ಗಳು ಕೆಲವೇ ಸೆಕೆಂಡಲ್ಲಿ ಡೌನ್‌ಲೋಡ್ ಆಗುತ್ತವೆ. ಫೈಬರ್ ಆಪ್ಟಿಕ್ ಆರ್ಕಿಟೆಕ್ಟರ್ ಅನ್ನು ಅಪ್ ಗ್ರೇಡ್ ಮಾಡಿದಾಗ ಸಿಂಗಲ್ ಯೂಸರ್ ಬ್ಯಾಂಡ್‌ವಿಡ್ಸ್ ಅನ್ನು ಸಾಂಪ್ರದಾಯಿಕ ಗಿಗಾಬೈಟ್‌ನಿಂದ 102 ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ರಾಜಸ್ಥಾನ | ಅಪ್ರಾಪ್ತನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ – ಮಹಿಳೆಗೆ 20 ವರ್ಷ ಜೈಲು
ಬ್ರಾಡ್‌ಬ್ಯಾಂಡ್ ವೇಗವರ್ಧನೆಯು ಭವಿಷ್ಯದಲ್ಲಿ 8ಕೆ ವೀಡಿಯೋ ಸ್ಟ್ರೀಮಿಂಗ್ ಆಪ್‌ಗಳು ಹಾಗೂ ಅಡ್ವಾನ್‌ಸ್ಟ್ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಅತ್ಯುನ್ನತ ವರ್ಚುವಲ್ ರಿಯಾಲಿಟಿ ಅನುಭವಕ್ಕೆ ಪೂರಕವಾಗಲಿದೆ ಎಂದು ವರದಿಯಾಗಿದೆ.