ರಾಮೇಶ್ವರಂ: ಕೆಲವು ಪ್ರಯಾಣಿಕರು ಟಿಕೆಟ್ ಖರೀದಿಸದೆ ರೈಲಿನಲ್ಲಿ ಪ್ರಯಾಣ ಮಾಡಿ ಸಿಕ್ಕಿಬೀಳ್ತಾರೆ. ಆದ್ರೆ ಬರೋಬ್ಬರಿ 1 ಸಾವಿರ ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದಾರೆ ಅಂದ್ರೆ ನಂಬ್ತೀರಾ?
ಹೌದು. ಟಿಕೆಟ್ ಕೊಡಲು ರೈಲ್ವೆ ಸ್ಟೇಷನ್‍ವೊಂದರಲ್ಲಿ ಸಿಬ್ಬಂದಿಯೇ ಇರದ ಕಾರಣ ಸುಮಾರು 1 ಸಾವಿರ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಿರುವ ಘಟನೆ ನಡೆದಿದೆ. ಬುಧವಾರದಂದು ರಾಮೇಶ್ವರಂನಿಂದ ಮಧುರೈಗೆ ಹೊರಟಿದ್ದ ರೈಲಿನಲ್ಲಿ 1000 ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದಾರೆ.
Advertisement
Advertisement
ಟಿಕೆಟ್ ಕೌಂಟರ್‍ನ ಸಿಬ್ಬಂದಿ ಅನಾರೋಗ್ಯದ ಕಾರಣ ಕೆಲಸಕ್ಕೆ ಬಂದಿರಲಿಲ್ಲ. ಹೀಗಾಗಿ ಪ್ರಯಾಣಿಕರು ಟಿಕೆಟ್ ಇಲ್ಲದೆ ರಾಮೇಶ್ವರಂ ಮಧುರೈ ಪ್ಯಾಸೆಂಜರ್ ರೈಲನ್ನು ಹತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement
Advertisement
ರೈಲು ನಿಲ್ದಾಣದಿಂದ ಹೊರಡುವವರೆಗೂ ಟಿಕೆಟ್ ಕೌಂಟರ್‍ನಲ್ಲಿ ಯಾರೂ ಇರದ ಕಾರಣ ಪ್ರಯಾಣಿಕರು ಓಡಿಬಂದು ಬೆಳಗ್ಗೆ 5.30ರ ರೈಲನ್ನು ಹಿಡಿಯಬೇಕಾಯ್ತು. ಈ ಬಗ್ಗೆ ಮಧುರೈನ ವಿಭಾಗೀಯ ರೈಲ್ವೆ ಮ್ಯಾನೇಜರ್‍ಗೆ ದೂರು ಕಳಿಸಲಾಗಿದೆ ಎಂದು ಅವರು ಹೇಳಿದ್ರು .
ಮಧುರೈ ರಾಮೇಶ್ವರಂನಿಂದ 161 ಕಿ.ಮೀ ದೂರದಲ್ಲಿದೆ.
ದೇಶದ ಮೊದಲ ಬುಲೆಟ್ ರೈಲು ಸಂಚರಿಸೋ ಮಾರ್ಗದಲ್ಲಿ ರೈಲ್ವೇಗೆ ಬರುತ್ತಿಲ್ಲ ನಿರೀಕ್ಷಿತ ಅದಾಯ! https://t.co/yIDHmTEARY#rti #mumbai #bullettrain #ahmedabad pic.twitter.com/iUl9UeIM6q
— PublicTV (@publictvnews) November 1, 2017