ಹಾವೇರಿ: ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯಗಳನ್ನು ತುಂಗಭದ್ರಾ ನದಿಗೆ (Tungabhadra River) ಹರಿಬಿಟ್ಟ ಕಾರಣ ಸಾವಿರಾರು ಜಲಚರಗಳು ಸಾವಿಗೀಡಾಗಿರುವ ಘಟನೆ ರಾಣೆಬೇನ್ನೂರಿನ (Ranebennur) ಉದಗಟ್ಟಿ ಗ್ರಾಮದಲ್ಲಿ ನಡೆದಿದೆ.
ನದಿ ತೀರದಲ್ಲಿ ಇರುವ ಕಾರ್ಖಾನೆಗಳು ನದಿಗೆ ರಾಸಾಯನಿಕ ಮಿಶ್ರಿತ ನೀರನ್ನು ಬಿಡುಗಡೆ ಮಾಡಿದ್ದರಿಂದ ಜಲಚರಗಳು ಸಾವನ್ನಪ್ಪಿವೆ. ನದಿಯಲ್ಲಿ ಸತ್ತ ಮಿನುಗಳನ್ನು (Fish) ತಿಂದು ಹಲವಾರು ಪಕ್ಷಿಗಳು ಸಹ ಸಾವನ್ನಪ್ಪಿವೆ. ಕಲುಷಿತ ನೀರಿನಿಂದ ನದಿ ನೀರಿನ ಬಣ್ಣ ಕಪ್ಪಾಗಿದೆ. ಇದನ್ನೂ ಓದಿ: ಮೆಡಿಕಲ್ ಕಾಲೇಜ್ ಸ್ಥಳಾಂತರಕ್ಕೆ ಆಕ್ರೋಶ – ರಾಮನಗರ ಬಂದ್‍ಗೆ ಕರೆ
Advertisement
Advertisement
ಕುಮಾರಪಟ್ಟಣದ ಬಳಿಯ ಕಾರ್ಖಾನೆಗಳಿಂದ ಜೀವ ಜಲಕ್ಕೆ ವಿಷ ಸೇರುತ್ತಿದೆ. ಕಾರ್ಖಾನೆಗಳ ಕಲುಷಿತ ನೀರು ಬಿಡುಗಡೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮೀ ಹೇಗೆ ಮುಂದುವರೆಯುತ್ತದೆ ನೋಡೋಣ: ಹೆಚ್‍ಡಿಡಿ ವ್ಯಂಗ್ಯ
Advertisement
Web Stories