ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ನೂತನ ಸಂಸತ್ ಭವನ (New Parliament Building) ಭಾನುವಾರ ಉದ್ಘಾಟನೆಗೊಳ್ಳಲು ಸಜ್ಜಾಗಿದೆ. ಮೋದಿ ಅವರ ಮಹಾತ್ವಾಕಾಂಕ್ಷೆಯ 20,000 ಕೋಟಿ ರೂ. ವೆಚ್ಚದ ಸೆಂಟ್ರಲ್ ವಿಸ್ಟಾ (Central Vista) ಯೋಜನೆಯ ಭಾಗವಾಗಿ ನೂತನ ಸಂಸತ್ ನಿರ್ಮಾಣಗೊಂಡಿದೆ.
ಪರಿಸರವಾದಿಗಳು, ಪ್ರತಿ ಪಕ್ಷಗಳು ಸೇರಿದಂತೆ ಅನೇಕ ಕಡೆಗಳಿಂದ ಸೆಂಟ್ರಲ್ ವಿಸ್ಟಾದ ಯೋಜನೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಈ ಸೆಂಟ್ರಲ್ ವಿಸ್ಟಾ ಯೋಜನೆ ವಾರ್ಷಿಕವಾಗಿ ಸರ್ಕಾರದ 1,000 ಕೋಟಿ ರೂ.ಯಷ್ಟು ಬಾಡಿಗೆಯನ್ನು ಉಳಿಸುತ್ತದೆ ಎಂದು ಈ ಹಿಂದೆಯೇ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದರು.
Advertisement
Advertisement
ಏನಿದು ಸೆಂಟ್ರಲ್ ವಿಸ್ಟಾ ಯೋಜನೆ?
ಕೇಂದ್ರ ದೆಹಲಿಯಲ್ಲಿನ ವಿವಿಧ ಕಟ್ಟಡಗಳಲ್ಲಿ ನೆಲೆಸಿರುವ ಅನೇಕ ಕಚೇರಿಗಳನ್ನು ಸೆಂಟ್ರಲ್ ವಿಸ್ಟಾದಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಕೈಗೆತ್ತಿಕೊಂಡ ಯೋಜನೆ ಇದಾಗಿದೆ.
Advertisement
ಕೇಂದ್ರ ಸರ್ಕಾರದ ಹಲವಾರು ಕಚೇರಿಗಳು ವಿವಿಧ ಸ್ಥಳಗಳಲ್ಲಿ ಚದುರಿ ಹೋಗಿವೆ. ಈ ಕಚೇರಿಗಳಲ್ಲಿ ಹಲವು ಹೆಚ್ಚಿನ ಮೊತ್ತದ ಬಾಡಿಗೆ ಕಟ್ಟಡಗಳಲ್ಲಿವೆ. ಸೆಂಟ್ರಲ್ ವಿಸ್ಟಾ ಯೋಜನೆ ಸಂಪೂರ್ಣಗೊಂಡ ಬಳಿಕ ಈ ಎಲ್ಲಾ ಕಚೇರಿಗಳನ್ನು ಒಂದೇ ಸ್ಥಳಕ್ಕೆ ವರ್ಗಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸರ್ಕಾರದಿಂದ ವಾರ್ಷಿಕವಾಗಿ ಖರ್ಚಾಗುವ ಬರೋಬ್ಬರಿ 1,000 ಕೋಟಿ ರೂ. ಮೊತ್ತದ ಬಾಡಿಗೆಯನ್ನು ಉಳಿಸಬಹುದು ಎಂದು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?
Advertisement
ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಲ್ಲಿ ಹೊಸ ಸಂಸತ್ ಭವನ ನಿರ್ಮಾಣ, ಸಂಸತ್ತಿನ ಸದಸ್ಯರ ಕಚೇರಿಗಳು, ಸೆಂಟ್ರಲ್ ವಿಸ್ಟಾ ಅವೆನ್ಯೂವಿನ (ರಾಜಪಥ) ಹೊಸ ಮಾದರಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಹೊಸ ನಿವಾಸಗಳ ನಿರ್ಮಾಣಗಳು ಒಳಗೊಂಡಿವೆ. ಇದಕ್ಕಾಗಿ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ರಾಜಪಥದಲ್ಲಿರುವ ಎಲ್ಲಾ 3.5 ಕಿ.ಮೀ ವರೆಗಿನ ಕಟ್ಟಡಗಳನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿತ್ತು.
ಸೆಂಟ್ರಲ್ ವಿಸ್ಟಾ ಯೋಜನೆಯ ಒಟ್ಟಾರೆ ವೆಚ್ಚ 20,000 ಕೋಟಿ ರೂ. ಆಗಿದೆ. ಈ ಯೋಜನೆ 2026ರ ವೇಳೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಹೊಸ ಸಂಸತ್‌ನಲ್ಲಿ `ಸೆಂಗೋಲ್’ ಸಮರ – ಅಧಿಕಾರ ಹಸ್ತಾಂತರದ ರಾಜದಂಡಕ್ಕೆ ಸಾಕ್ಷ್ಯವೇ ಇಲ್ಲ ಅಂತಿದೆ ಕಾಂಗ್ರೆಸ್