ಧಾರವಾಡ: ಇತ್ತೀಚಿನ ದಿನಗಳಲ್ಲಿ ಜನರು 70 ರಿಂದ 80 ವರ್ಷ ಬದುಕೋದು ಹೆಚ್ಚು. ಆದ್ರೆ ಧಾರವಾಡದ ಅಜ್ಜಿಯೊಬ್ಬರು 5 ಮಕ್ಕಳು, 60 ಕ್ಕೂ ಹೆಚ್ಚು ಮೊಮ್ಮಕ್ಕಳು, ಮರಿ ಮಕ್ಕಳೊಂದಿಗೆ ತಮ್ಮ 100ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ನಗರದ ಹಾವೇರಿಪೇಟೆಯ ಯಮ್ಮನಮ್ಮ ಮಂಗಳೂರು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ ಅಜ್ಜಿಯ ಗೆಳತಿಯರೂ ಸಂಭ್ರಮದಲ್ಲಿ ಭಾಗವಹಿಸಿ ಅಜ್ಜಿಯನ್ನು ಸನ್ಮಾನ ಮಾಡಿದರು.
Advertisement
ಈ ವಯಸ್ಸಲ್ಲೂ ಅಜ್ಜಿಗೆ ರೊಟ್ಟಿ ಅಂದರೆ ಇಷ್ಟವಂತೆ. ಮೊಮ್ಮಕ್ಕಳು ಹಾಗೂ ಮರಿ ಮಕ್ಕಳು ಎಷ್ಟು ಜನಾ ಅಂತಾ ಕೇಳಿದ್ರೆ, ಲೆಕ್ಕಾ ಸಿಗಲ್ಲ ಬಿಡಿ ಅಂತಾ ಹೇಳ್ತಾರೆ. ಮೊದಲು ಹೊಲದಲ್ಲಿ ಕೆಲಸ ಮಾಡುವ ದಿನಗಳಲ್ಲಿ ಊಟ ನೀರು ಇಲ್ಲದೇ ಗದ್ದೆಗಳಲ್ಲಿ ಕೆಲಸ ಮಾಡಿದ್ದೇವೆ. ಇಂದು ಮಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಅಂತಾ ಅಜ್ಜಿ ಸಂತಸದಿಂದ ಹೇಳ್ತಾರೆ.