ಮುಂಬೈ: ಮಹಾರಾಷ್ಟ್ರ (Maharastra) ದಲ್ಲಿ ಸುರಿದ ಭಾರೀ ಮಳೆ (Rain) ಗೆ 100 ವರ್ಷ ಹಳೆಯ ಬೃಹತ್ ಮರವೊಂದು ಉರುಳಿ ಶೆಡ್ (Tree Falls On Shed) ಮೇಲೆ ಬಿದ್ದಿದೆ. ಪರಿಣಾಮ ಕನಿಷ್ಠ 7 ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement
ಈ ಘಟನೆ ಮಹಾರಾಷ್ಟ್ರದ ಅಕೋಲಾ (Akola) ದಲ್ಲಿ ನಡೆದಿದೆ. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ದೇಗುಲವೊಂದರ ಮುಂಭಾಗದಲ್ಲಿ ಧಾರ್ಮಿಕ ಸಮಾರಂಭ ನಡೆಯುತ್ತಿತ್ತು. ಭಾರೀ ಮಳೆ ಹಾಗೂ ಗಾಳಿ ಹಿನ್ನೆಲೆಯಲ್ಲಿ ಭಕ್ತರು ಶೆಡ್ ಅಡಿಯಲ್ಲಿ ನಿಂತಿದ್ದರು. ಈ ವೇಳೆ ಬೃಹತ್ ಬೇವಿನ ಮರ ಶೆಡ್ ಮೇಲೆ ಬಿದ್ದಿದೆ. ಇದನ್ನೂ ಓದಿ: ಬಿಜೆಪಿ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಗಲಾಟೆ – ಮಾರಕಾಸ್ತ್ರ ಹಿಡಿದು ಎರಡು ಗುಂಪುಗಳು ಹೊಡೆದಾಟ
Advertisement
Advertisement
ಸುಮಾರು 40 ಮಂದಿ ಶೆಡ್ ಅಡಿಯಲ್ಲಿ ನಿಂತಿದ್ದು, ಮರ ಬಿದ್ದ ಪರಿಣಾಮ ಅದರಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. 5 ಮಂದಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಅಕೋಲಾದ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ದುರ್ಘಟನೆ ನಡೆಯುತ್ತಿದ್ದಂತೆಯೇ ಮಾಹಿತಿ ಅರಿತ ಪೊಲೀಸರ ತಂಡ ಹಾಗೂ ಅಂಬುಲೆನ್ಸ್ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ನಡೆಸಿತು. ಜೆಸಿಬಿಯನ್ನು ಕೂಡ ಸ್ಥಳಕ್ಕೆ ಕರೆಸಿಕೊಳ್ಳಲಾಯಿತು.
Advertisement
At least 7 killed, 40 injured when a 100 year old tree fallen on rooftop of temple in Paras town of #Maharashtra‘s Akola yesterday.
District magistrate Neema Arora informs about this tragic incident, says, all possible assistance & compensation to be provided by administration. pic.twitter.com/XbmBaTsyQz
— All India Radio News (@airnewsalerts) April 10, 2023
ಘಟನೆ ಸಂಬಂಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಮಹಾರಾಷ್ಟ್ರ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಹೇಳಿದ್ದಾರೆ.