ಭೋಪಾಲ್: ಮಧ್ಯಪ್ರದೇಶದ (Madhya Pradesh) ಸಿಂಗ್ರೌಲಿಯಲ್ಲಿರುವ (Singrauli) ಶಾಲೆಯೊಂದರಲ್ಲಿ 100 ವಿದ್ಯಾರ್ಥಿಗಳು ಎರಡೂ ಕೈಗಳಲ್ಲಿಯೂ ಏಕಕಾಲದಲ್ಲಿಯೇ ಬರೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೊತೆಗೆ ಅವರೆಲ್ಲರೂ ಐದು ಭಾಷೆಗಳಲ್ಲಿಯೂ ಪಾರಂಗತರಾಗಿದ್ದಾರೆ.
ಹೌದು, ಸಿಂಗ್ರೌಲಿಯ ಬುಧೇಲಾ ಗ್ರಾಮದಲ್ಲಿರುವ (Budhela village) ವೀಣಾ ವಾದಿನಿ ಪಬ್ಲಿಕ್ ಸ್ಕೂಲ್‍ನ (Veena Vadini Public School)ವಿದ್ಯಾರ್ಥಿಗಳು ಹಿಂದಿ, ಸಂಸ್ಕೃತ, ಇಂಗ್ಲಿಷ್, ಉರ್ದು ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರವೀಣರಾಗಿದ್ದಾರೆ. ಇದನ್ನೂ ಓದಿ: ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಇಬ್ಬರು ಸಾವಿನ ಬೆನ್ನಲ್ಲೇ ಅಮೆರಿಕ ತುರ್ತು ಸಭೆ
Advertisement
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡನಾಡಿದ 8ನೇ ತರಗತಿ ವಿದ್ಯಾರ್ಥಿ ಪಂಕಜ್ ಯಾದವ್, ಮೊದಲು ಬಲಗೈ ಬಳಸಿ ಬರೆಯುತ್ತಿದ್ದೆ, ನಂತರ ಎಡಗೈಯಲ್ಲಿ ಬರೆಯಲು ಕಲಿತೆ. ಮೂರನೇ ತರಗತಿಯಲ್ಲಿ ಎರಡೂ ಕೈಗಳನ್ನು ಬಳಸಿ ಬರೆಯುವುದು ಗೊತ್ತಾಯಿತು ಎಂದು ತಿಳಿಸಿದರೆ, ಮತ್ತೋರ್ವ ವಿದ್ಯಾರ್ಥಿ ಆದರ್ಶ್ ಕುಮಾರ್ ನಾನು ಪ್ರಾಥಮಿಕ ತರಗತಿಯಲ್ಲಿದ್ದಾಗ ಬಲಗೈನಲ್ಲಿ ಬರೆಯುತ್ತಿದ್ದೆ. ನಂತರ ಎಡಗೈನಲ್ಲಿ ಬರೆಯಲು ಪ್ರಾರಂಭಿಸಿದೆ. ನಮಗೆ ಐದು ಭಾಷೆಗಳು ಕೂಡ ಗೊತ್ತು ಎಂದಿದ್ದಾರೆ.
Advertisement
#Video | 100 Students At This Madhya Pradesh School Write Using Both Hands https://t.co/xBlSakTIiZ pic.twitter.com/Rw3vm1pmmz
— NDTV (@ndtv) November 15, 2022
Advertisement
ವಿದ್ಯಾರ್ಥಿಗಳ ಈ ಕೌಶಲ್ಯದ ಹಿಂದೆ ಮಾಜಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ (Rajendra Prasad) ಅವರೇ ಸ್ಫೂರ್ತಿಯಾಗಿದ್ದಾರೆ. ರಾಜೇಂದ್ರ ಪ್ರಸಾದ್ ದ್ವಂದ್ವಾರ್ಥಿ, ಎರಡೂ ಕೈ ಬಳಸಿ ಬರೆಯಬಲ್ಲರು. ನಾವು ಅದನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದೇವೆ ಮತ್ತು ನಮ್ಮ ಮಕ್ಕಳಿಗೆ ಅದೇ ರೀತಿಯ ಕೌಶಲ್ಯವನ್ನು ಕಲಿಯಲು ಸಹಾಯ ಮಾಡಿದೆವು ಎಂದು ಶಾಲೆಯ ಪ್ರಾಂಶುಪಾಲ ವಿರಂಗದ್ ಶರ್ಮಾ ತಿಳಿಸಿದ್ದಾರೆ.
Advertisement
1999ರಲ್ಲಿ ವೀಣಾ ವಾದಿನಿ ಪಬ್ಲಿಕ್ ಸ್ಕೂಲ್ ಸ್ಥಾಪಿಸಲಾಯಿತು. ಇಲ್ಲಿಯವರೆಗೆ ಸುಮಾರು 480 ವಿದ್ಯಾರ್ಥಿಗಳು ಇಲ್ಲಿಂದ ಪದವಿ ಪಡೆದಿದ್ದಾರೆ ಮತ್ತು ಅವರೆಲ್ಲರೂ ಎರಡೂ ಕೈಗಳನ್ನು ಬಳಸಿ ಬರೆಯಬಲ್ಲರು. ಈ ಶಾಲೆಯಲ್ಲಿ ನಿಯಮಿತ ತರಗತಿಗಳ ಜೊತೆಗೆ, ವಿದ್ಯಾರ್ಥಿಗಳಿಗೆ ಒಂದು ಗಂಟೆ ಯೋಗ ಮತ್ತು ಧ್ಯಾನವನ್ನು ಸಹ ಕಲಿಸಲಾಗುತ್ತದೆ. ಈ ಶಾಲೆಯ ವಿದ್ಯಾರ್ಥಿಗಳು ಒಂದು ನಿಮಿಷದಲ್ಲಿ 250 ಪದಗಳ ಪಠ್ಯವನ್ನು ಭಾಷಾಂತರಿಸು ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಬಡ ಪ್ರತಿಭಾವಂತನ ಬೆನ್ನಿಗೆ ನಿಂತ ಶಾಸಕ ಪರಣ್ಣ ಮುನವಳ್ಳಿ
ಈ ವಿಚಾರವಾಗಿ ಸ್ಥಳೀಯ ಮನಃಶಾಸ್ತ್ರಜ್ಞ ಆಶಿಶ್ ಪಾಂಡೆ ಅವರು ಮಾತನಾಡಿ, ನಮ್ಮ ಮೆದುಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೆದುಳಿನ ಎರಡೂ ಭಾಗಗಳನ್ನು ಏಕಕಾಲದಲ್ಲಿ ಬಳಸುವಂತೆ ಮತ್ತು ಎರಡೂ ಕೈಗಳನ್ನು ಬಳಸಿ ಬರೆಯಲು ಸಾಧ್ಯವಾಗುವ ರೀತಿಯಲ್ಲಿ ತರಬೇತಿ ನೀಡಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.