ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ (Delhi) ದಿನೇ ದಿನೇ ಗ್ಯಾಸ್ ಚೇಂಬರ್ ಆಗಿ ಬದಲಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಇಂದು ಸುಮಾರು 100 ವಿಮಾನಗಳನ್ನು (Flights) ಸ್ಥಗಿತಗೊಳಿಸಲಾಗಿದ್ದು, 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬಗೊಂಡಿದೆ.
ದೆಹಲಿಯಲ್ಲಿನ ದಟ್ಟ ಮಂಜು ಜನಸಾಮಾನ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ರಾಜಧಾನಿ ದೆಹಲಿ ವಾಯುಗುಣಮಟ್ಟ ಕೂಡ 500 AQI ತಲುಪಿದೆ. ದಟ್ಟ ಹೊಗೆ ಹಾಗೂ ಮಂಜಿನಿಂದ ವಿಮಾನಗಳ ಹಾರಾಟದಲ್ಲಿ ಅಡಚಣೆ ಉಂಟಾಗಿದ್ದು, ದೆಹಲಿ ಏರ್‌ಪೋರ್ಟ್ ಹಾಗೂ ಇಂಡಿಗೋ ಸಂಸ್ಥೆ ಹಾಗೂ ಏರ್ ಇಂಡಿಯಾ ತಮ್ಮ ಪ್ರಯಾಣಿಕರಿಗೆ ಎಕ್ಸ್‌ನಲ್ಲಿ ಈ ಕುರಿತು ಸಲಹೆ ಸೂಚನೆ ನೀಡಿದೆ. ಇನ್ನು ನಾನಾ ಭಾಗಗಳಿಗೆ ಹೊರಡಬೇಕಿದ್ದ 60 ರೈಲುಗಳನ್ನು ಕೂಡ ಕ್ಯಾನ್ಸಲ್ ಮಾಡಲಾಗಿದೆ. ಇದನ್ನೂ ಓದಿ: Pahalgam Terror Attack | ಚಾರ್ಜ್‌ಶೀಟ್ ಸಲ್ಲಿಕೆ – ಆಪರೇಷನ್ ಮಹಾದೇವ್‌ನಲ್ಲಿ ಹತ್ಯೆಯಾದ ಉಗ್ರರ ಹೆಸರು ಉಲ್ಲೇಖ
ಈ ಮಧ್ಯೆ, ಜೋರ್ಡಾನ್, ಇಥಿಯೋಪಿಯಾ, ಓಮನ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿಗೂ ವಾಯುಮಾಲಿನ್ಯ ಎಫೆಕ್ಟ್ ತಟ್ಟಿದೆ. ದೆಹಲಿಯಲ್ಲಿ ದಟ್ಟ ಮಂಜಿನಿಂದಾಗಿ ವಿಮಾನ ಸರಿಯಾದ ಸಮಯಕ್ಕೆ ಬಾರದ ಪರಿಣಾಮ ಪ್ರಧಾನಿ ಮೋದಿ ವಿದೇಶ ಪ್ರವಾಸ ವಿಳಂಬವಾಗಿದೆ. ಬೆಳಗ್ಗೆ 8:30ಕ್ಕೆ ತೆರಳಬೇಕಿದ್ದ ವಿಮಾನ ಸ್ವಲ್ಪ ಸಮಯ ತಡವಾಗಿ ಟೇಕಾಫ್ ಆಗಿದೆ. ಇದನ್ನೂ ಓದಿ: ಅಪಘಾತ ರಹಿತ ಸೇವೆ ಸಲ್ಲಿಸೋ KSRTC ಚಾಲಕರಿಗೆ ಪ್ರೋತ್ಸಾಹ ಧನ ಹೆಚ್ಚಳ
ಅಲ್ಲದೇ ದೆಹಲಿಯ ದಟ್ಟ ಮಂಜು ಸುಪ್ರೀಂ ಕೋರ್ಟ್ ಕಲಾಪಕ್ಕೂ ತಟ್ಟಿದೆ. ವಕೀಲರು ಹಾಗೂ ಅರ್ಜಿದಾರರು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾಣೆಗೆ ಹಾಜರಾಗುವಂತೆ ನ್ಯಾಯಾಧೀಶರು ಸಲಹೆ ನಿಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ರ‍್ಯಾಲಿಯಲ್ಲಿ ‘ಮೋದಿ ಸಮಾಧಿ’ ಘೋಷಣೆ – ಸದನದಲ್ಲಿ ಸೋನಿಯಾ ಗಾಂಧಿ ಕ್ಷಮೆಗೆ ಆಗ್ರಹಿಸಿದ ಬಿಜೆಪಿ
ಇನ್ನು, ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇಯಲ್ಲಿ ಬೆಳಗ್ಗೆ ದಟ್ಟವಾದ ಮಂಜು ಆವರಿಸಿದ ಕಾರಣ ಸರಣಿ ಅಪಘಾತಗಳು ಸಂಭವಿಸಿವೆ. ರಾನಿಯಾಲ ಗ್ರಾಮದ ಬಳಿ ಸುಮಾರು ವಾಹನಗಳು ಒಂದರ ನಂತರ ಒಂದರಂತೆ ಡಿಕ್ಕಿಯಾಗಿವೆ. ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 20 ವಾಹನಗಳು ಜಖಂಗೊಂಡಿವೆ. ಇದನ್ನೂ ಓದಿ: 3 ವರ್ಷದ ಬಳಿಕ ಪ್ರಿಯಾಂಕಾ, ಪ್ರಶಾಂತ್ ಕಿಶೋರ್ ಮಾತುಕತೆ – ಮತ್ತೆ ಕಾಂಗ್ರೆಸ್ ಪರ ರಣತಂತ್ರ?

