Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಮಾ. 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ. ಅನುದಾನ – ಕ್ರಿಯಾಯೋಜನೆ ಸಲ್ಲಿಸಲು ಬೊಮ್ಮಾಯಿ ಸೂಚನೆ

Public TV
Last updated: February 3, 2023 12:16 am
Public TV
Share
4 Min Read
BASAVARAJ BOMMAI GADI CHETHANA PROGRAM
SHARE

– ಕನ್ನಡದ ಶಬ್ದ, ಭಾವಾರ್ಥದಲ್ಲಿ ಶ್ರೀಮಂತವಾಗಿದೆ

ಬೆಂಗಳೂರು: ಗಡಿಭಾಗದಲ್ಲಿ (Border) ಶಿಕ್ಷಣ, ಕೈಗಾರಿಕೆ, ಮೂಲಭೂತ ಸೌಕರ್ಯ, ಕನ್ನಡ (Kannada) ಭಾಷಾ ಅಭಿವೃದ್ಧಿಗಳ ಬಗ್ಗೆ ಕೆಲಸ ಮಾಡುವ ಅವಶ್ಯಕತೆ ಇದ್ದು, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಇದೇ ವರ್ಷದ ಮಾರ್ಚ್ 31ರೊಳಗೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಈ ಅನುದಾನಕ್ಕೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೂಚಿಸಿದರು.

Contents
– ಕನ್ನಡದ ಶಬ್ದ, ಭಾವಾರ್ಥದಲ್ಲಿ ಶ್ರೀಮಂತವಾಗಿದೆLive Tv

BASAVARAJ BOMMAI GADI CHETHANA PROGRAM 1

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (Border Area Development Authority) ವತಿಯಿಂದ ಆಯೋಜಿಸಿರುವ ‘ಗಡಿನಾಡ ಚೇತನ’ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೇ 25 ಕೋಟಿ ರೂ. ನೀಡಲಾಗಿದೆ. ಮುಂದಿನ ಆಯವ್ಯಯದಲ್ಲಿಯೂ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸುವ ಭರವಸೆಯನ್ನು ನೀಡಿದರು. ಗಡಿಭಾಗದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಗಡಿ ಆಚೆ ಇರುವ ಕನ್ನಡಿಗರೂ ನಮ್ಮವರು. ಅವರ ಬೇಡಿಕೆಗೂ ಸ್ಪಂದಿಸುವ ಕೆಲಸ ನಾವು ಮಾಡುತ್ತೇವೆ ಎಂದರು. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಹಗರಣ – 1 ವಾರದ ಒಳಗೆ ತನಿಖಾ ವರದಿ ಸಲ್ಲಿಸಿ

ಗಡಿ ಭಾಗದ ಜನರ ಭವಿಷ್ಯ ಸುನಿಶ್ಚಿತಗೊಳಿಸುವುದು ನಮ್ಮ ಕರ್ತವ್ಯ:
ಕರ್ನಾಟಕದ ಮುಖ್ಯಮಂತ್ರಿಯಾಗಿ ಅಗಿ ಭಾಷೆ ಗಡಿಭಾಗದವರ ರಕ್ಷಣೆ, ಪೋಷಣೆ ಮತ್ತು ಭವಿಷ್ಯವನ್ನು ಸುನಿಶ್ಚಿತಗೊಳಿಸುವುದು ನನ್ನ ಕರ್ತವ್ಯ. ನಮ್ಮ ಗಡಿಯಲ್ಲಿನ ಕನ್ನಡಿಗರ ಅಭಿವೃದ್ಧಿಯ ಬಗ್ಗೆ ಮೊದಲು ನಾವು ಗಮನಹರಿಸಬೇಕು. ಗಡಿಭಾಗದಲ್ಲಿರುವ ಕನ್ನಡಿಗರನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಗಡಿಭಾಗದ ಕನ್ನಡಿಗರಿಗೆ ಎಲ್ಲ ಸೌಕರ್ಯಗಳನ್ನು, ಅವಕಾಶಗಳನ್ನು ನೀಡಿ, ಭವಿಷ್ಯವನ್ನು ಬರೆಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಗಡಿ ಪ್ರಾಧಿಕಾರಕ್ಕೆ ಮೊದಲು 8-10 ಕೋಟಿ ನೀಡುತ್ತಿದ್ದರು ಎಂದು ತಿಳಿಸಿದರು.

BASAVARAJ BOMMAI AND CHANDRSHEKAR KAMBARA

ಗಡಿಭಾಗದ ಜನರು ಸಾಮರಸ್ಯದಿಂದ ಬದುಕುವಂತಾಗಬೇಕು:
ಪ್ರಾದೇಶಿಕ ರಾಜ್ಯಗಳಿ ಭಾಷೆವಾರು ಆದಾಗ, ಸಹಜವಾಗಿ ವ್ಯತ್ಯಾಸಗಳು ಬಂದೇ ಬರುತ್ತವೆ. ನಿಖರವಾದ ರೇಖೆಯನ್ನು ಯಾವುದೇ ರಾಜ್ಯ ಅಥವಾ ದೇಶದ ನಡುವೆ ಎಳೆಯಲು ಸಾಧ್ಯವಿಲ್ಲ. ಆದ ಕಾಲಕಳೆದಂತೆ, ವ್ಯತ್ಯಾಸಗಳನ್ನು ಮರೆತು ಸಾಮರಸ್ಯದಿಂದ ಬದುಕುವುದು ಬಹಳ ಮುಖ್ಯ. ಆದರೆ ಈ ರೀತಿ ಆಗಲಿಲ್ಲ ಎಂಬ ಕೊರಗು ಕನ್ನಡಿಗರಿಗಿದೆ. ಗಡಿ ಭಾಗದಲ್ಲಿ ಯಾವುದೇ ಭಾಷೆ ಮಾತನಾಡಿದರು ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ನಾನು ಬೆಳಗಾವಿ ಅಧಿವೇಶನಕ್ಕೆ ಹೋದಾಗ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ಪ್ರೀತಿಯಿಂದ ಮಾತನಾಡುತ್ತಾರೆ. ಜನರ ಮಧ್ಯೆ ಇಲ್ಲದಿರುವ ಸಮಸ್ಯೆಗಳನ್ನು ಬೆಳೆಸಿಕೊಂಡು ಹೋಗುವುದು ರಾಜ್ಯಕ್ಕಾಗಲಿ, ದೇಶಕ್ಕಾಗಲಿ ಒಳಿತನ್ನು ತರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು :
ಕನ್ನಡದ (Kannada) ಶಬ್ದ, ಭಾವಾರ್ಥದಲ್ಲಿ ಶ್ರೀಮಂತವಾಗಿದೆ. ಈ ಭಾಷೆಯಲ್ಲಿ ಸ್ಪಷ್ಟತೆಯಿದ್ದು, ಕನ್ನಡಕ್ಕೆ ಭವ್ಯವಾದ ಭವಿಷ್ಯ ಇದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕನ್ನಡಕ್ಕೆ ಅಂತರ್ಗತ ಶಕ್ತಿಯಿದ್ದು, ಯಾವುದೇ ಸರ್ಕಾರದ ರಕ್ಷಣೆಯ ಅವಶ್ಯಕತೆಯಿಲ್ಲ. ಕನ್ನಡ ಭಾಷೆಗೆ ಯಾವುದೇ ಆತಂಕವಿಲ್ಲ. ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಎಲ್ಲ ಭಾಷೆಗಳ ಪೈಪೋಟಿ, ಪ್ರಭಾವವನ್ನು ಎದುರಿಸಿ, ಕನ್ನಡ ಸಾಹಿತ್ಯ ಜ್ಞಾನಪೀಠ ಪ್ರಶಸ್ತಿ ಪಡೆಯುತ್ತಿದೆ ಎಂದು ನುಡಿದರು.

BASAVARAJ BOMMAI GADI CHETHANA PROGRAM 2

ಸರಳ, ಸಾರ್ವಜನಿಕರ ಸಾಹಿತ್ಯ ಅಗತ್ಯ:
ಅರ್ಹತೆಯ ಆಧಾರದ ಮೇಲೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕನ್ನಡ ಶಕ್ತಿಗೆ ಇದೇ ಉದಾಹರಣೆ. ಕನ್ನಡದಲ್ಲಿ ಅದ್ಭುತ ಸಾಹಿತ್ಯವಿದೆ. ಜೀವನಕ್ಕೆ ಬದುಕು ತೋರಿಸುವ ವಚನ ಮತ್ತು ದಾಸ ಸಾಹಿತ್ಯ. ಬದುಕಿಗೆ ಹತ್ತಿರವಿದ್ದು ಜನಪ್ರಿಯವಾಗಿ ಸಾರ್ವಜನಿಕವಾಗುತ್ತದೆ. ಸಾರ್ವಜನಿಕ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯ. ಅರ್ಥ, ಒಳರ್ಥಗಳನ್ನು ಸಾಮಾನ್ಯಜನರಿಗೆ ಅತ್ಯಂತ ಸರಳವಾಗಿ ತಿಳಿಸುವುದೇ ಸಾಹಿತ್ಯದ ಕೆಲಸ. ಜ್ಞಾನವನ್ನು ಸರಳವಾಗಿ ಅಭಿವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ ಆ ಸಾಹಿತ್ಯ ನಿಘಂಟಾಗುತ್ತದೆ. ನಮಗೆ ನಿಘಂಟಿನ ಸಾಹಿತ್ಯ ಬೇಕಾಗಿಲ್ಲ. ಸರಳ, ಸಾರ್ವಜನಿಕರ ಸಾಹಿತ್ಯ ನಮಗೆ ಅಗತ್ಯ. ಕನ್ನಡದಲ್ಲಿ ಇದು ಸಾಧ್ಯವಿದೆ. ಕನ್ನಡ ಉಳಿದಿದ್ದರೆ, ಬೆಳೆದಿದ್ದರೆ ಸಾಹಿತಿಗಳು ಮೂಲ ಕಾರಣ ಎಂದರು. ಇದನ್ನೂ ಓದಿ: ಕರ್ನಾಟಕ-ಆಂಧ್ರ ನಡುವೆ ಸಾರಿಗೆ ಒಪ್ಪಂದ – ಮತ್ತಷ್ಟು ಬಸ್ ಸಂಚಾರ ಆರಂಭ

ಜ್ಞಾನ ಎಲ್ಲಾ ಕಡೆಯಿಂದ ಹರಿಯಬೇಕು:
ಯುವಕರು ಉತ್ತಮವಾದ ಸಾಹಿತ್ಯ ರಚನೆ ಮಾಡುತ್ತಾರೆ. ಆಧ್ಯಾತ್ಮ, ವಿಸ್ಮಯವಾದ ವಿಚಾರಗಳಲ್ಲಿ ಉತ್ತಮ ಸಾಹಿತ್ಯ ಬರುತ್ತಿದೆ. ಜ್ಞಾನ ಎಲ್ಲಾ ಕಡೆಯಿಂದ ಹರಿಯಬೇಕು. ತಮ್ಮ ತಾಯಿಯ ಹೆಸರಿನಲ್ಲಿ ಅವ್ವ ಎಂದು ವಾರ್ಷಿಕ ಸಂಚಿಕೆ ಹೊರತರುತ್ತಿದ್ದು, ತಾಯಿಯ ಬಗ್ಗೆ ಜಗತ್ತಿನಲ್ಲಿ ಲಭ್ಯವಿರುವ ಶ್ರೇಷ್ಠ ಕಥೆ, ಕವನಗಳನ್ನು ಈ ಮೂಲಕ ಪ್ರಕಟಿಸಿರುವುದಾಗಿ ಹೇಳಿದರು. ಇವೆಲ್ಲವನ್ನೂ ಕನ್ನಡಕ್ಕೆ ತಂದರೆ ಕನ್ನಡ ಶ್ರೀಮಂತವಾಗುತ್ತದೆ. ಜಗತ್ತು ಸಣ್ಣದಾಗುತ್ತಿರುವ ಈ ಹೊತ್ತಿನಲ್ಲಿ ಕನ್ನಡವೂ ಅಗ್ರಮಾನ್ಯವಾಗಬೇಕು. ನಮ್ಮ ಚೌಕಟ್ಟನ್ನು ಮೀರಿ ಕನ್ನಡವನ್ನು ಬೆಳೆಸಲು ಕನ್ನಡಕ್ಕೆ ಅಗತ್ಯವಿರುವ ವಿಚಾರಗಳನ್ನು ಕನ್ನಡಕ್ಕೆ ತರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡದ ಏಕೀಕರಣ:
ಗಡಿನಾಡಿನಲ್ಲಿ ಲಿಗಾಡೆ, ಪಟ್ಟದ್ದೇವರು ಆ ಕಾಲದಲ್ಲಿ ಮಾಡಿರುವ ಕೆಲಸ ಗಟ್ಟಿತನದ್ದು. ಕನ್ನಡದ ಏಕೀಕರಣ ಸುಲಭವಾಗಿರಲಿಲ್ಲ. ಸ್ವಾತಂತ್ರ್ಯದ ಪೂರ್ವದಲ್ಲಿ ಹಾಗೂ ನಂತರದಲ್ಲಿ ಆಡಳಿತಗಾರರು ಕನ್ನಡದ ಏಕೀಕರಣಕ್ಕೆ ಮಹತ್ವ ನೀಡಿ ಕನ್ನಡದ ಮನಸ್ಸುಗಳು ಒಂದಾದವು. ಅಂದೂ ಸಾಹಿತ್ಯ ಮಹತ್ವದ ಪಾತ್ರವನ್ನು ವಹಿಸಿತ್ತು. ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ಗಡಿ ಪ್ರಾಧಿಕಾರ ಉತ್ತಮ ಕೆಲಸ ಮಾಡಿದೆ. ಅವರ ಶಕ್ತಿಗೆ ಅಗತ್ಯ ಸಹಕಾರ, ಅನುದಾನವನ್ನು ಸರ್ಕಾರ ನೀಡಲಿದೆ. ಉತ್ತಮ ಕ್ರಿಯಾಯೋಜನೆ ತಯಾರಿಸಿ ಎಂದರು. ಬಳಿಕ ಪ್ರಶಸ್ತಿ ವಿಜೇತರಿಗೆ ಅಭಿನಂದಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ (Chandrashekhara Kambara), ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್, ಎಂ.ಎಸ್.ಸಿಂಧೂರ, ಮಾಜಿ ಸಚಿವೆ ಲೀಲಾ ದೇವಿ ಆರ್.ಪ್ರಸಾದ್, ಅಶೋಕ್ ಚಂದರಗಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:Basavaraj BommaiBorder Development Authoritykarnatakaಕನ್ನಡಕರ್ನಾಟಕಗಡಿ ಅಭಿವೃದ್ಧಿ ಪ್ರಾಧಿಕಾರಬಸವರಾಜ ಬೊಮ್ಮಾಯಿ
Share This Article
Facebook Whatsapp Whatsapp Telegram

Cinema Updates

Ajith Kumar Adhik Ravichandran AK 64
ಮತ್ತೆ ಒಂದಾಯ್ತು ಗುಡ್ ಬ್ಯಾಡ್ ಅಗ್ಲಿ ಕಾಂಬಿನೇಷನ್
Cinema Latest Top Stories
Darshan 4
ಥಾಯ್ಲೆಂಡ್‌ನಲ್ಲಿ ದರ್ಶನ್ ಕೂಲ್ ಕೂಲ್
Cinema Latest Sandalwood
Son of Sardaar
ಸನ್ ಆಫ್ ಸರ್ದಾರ್‌ -2 ರಿಲೀಸ್ ಡೇಟ್ ಮುಂದೂಡಿಕೆ
Bollywood Cinema Latest Top Stories
Darshan Devil 3
ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ
Cinema Latest Main Post Sandalwood
Dalapathi Vijay
ಸಂಕ್ರಾಂತಿಗೆ ವಿಜಯ್ ದಳಪತಿ-ಶಿವಕಾರ್ತಿಕೇಯನ್ ಮುಖಾಮುಖಿ
Cinema Latest South cinema Top Stories

You Might Also Like

Koppal KRIDL
Crime

ಕೊಪ್ಪಳ KRIDLನಲ್ಲಿ 72 ಕೋಟಿ ರೂ. ಭ್ರಷ್ಟಾಚಾರ

Public TV
By Public TV
8 hours ago
SIT
Bengaluru City

Exclusive | ಧರ್ಮಸ್ಥಳ ಫೈಲ್ಸ್‌ – ತನಿಖೆಗೆ ಆರಂಭದಲ್ಲೇ ವಿಘ್ನ; SITಯಿಂದ ಇಬ್ಬರು ಅಧಿಕಾರಿಗಳು ಹಿಂದಕ್ಕೆ?

Public TV
By Public TV
8 hours ago
Dharmasthala Mass Burials
Dakshina Kannada

ಶವಗಳನ್ನು ಹೂತಿಟ್ಟ ಪ್ರಕರಣ – ಎಸ್‌ಐಟಿ ತನಿಖೆ ಸ್ವಾಗತಿಸಿದ ಧರ್ಮಸ್ಥಳ ಕ್ಷೇತ್ರದ ವಕ್ತಾರ

Public TV
By Public TV
8 hours ago
CBI
Bengaluru City

SBI ಬ್ಯಾಂಕ್‌ಗೆ 8 ಕೋಟಿ ವಂಚನೆ – 20 ವರ್ಷದಿಂದ ಸಿಗದವರು ಇಮೇಜ್ ಸರ್ಚ್ ಅನಾಲಿಟಿಕ್ಸ್‌ ಸಾಫ್ಟ್‌ವೇರ್‌ನಿಂದ ಸಿಬಿಐಗೆ ಲಾಕ್

Public TV
By Public TV
8 hours ago
Shravan Singh 2
Latest

ಆಪರೇಷನ್ ಸಿಂಧೂರ ವೇಳೆ ಯೋಧರಿಗೆ ಸಹಾಯ – 10ರ ಬಾಲಕನ ಶಿಕ್ಷಣ ವೆಚ್ಚ ಭರಿಸಲು ಮುಂದಾದ ಸೇನೆ

Public TV
By Public TV
9 hours ago
Justice Yashwant Varma impeachment
Latest

ಜಸ್ಟಿಸ್ ವರ್ಮಾ ಪದಚ್ಯುತಿಗೆ 100 ಸಂಸದರ ಸಹಿ: ಕಿರಣ್ ರಿಜಿಜು

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?