ಬೆಂಗಳೂರು: ಕಾಂಗ್ರೆಸ್‌ಗೆ (Congress) ವಾಪಸ್ ಹೋಗೋ ಬಗೆಗಿನ ವದಂತಿ ಬಗ್ಗೆ ಮಾಜಿ ಸಚಿವ ಎಸ್.ಟಿ ಸೋಮಶೇಖರ್ (ST Somashekar) ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ನಾನು ಕಾಂಗ್ರೆಸ್‌ಗೆ ಹೋಗಲ್ಲ, 100% ಲೋಕಸಭೆಗೂ ಹೋಗಲ್ಲ, ನನ್ನ ಮಗನೂ 100% ರಾಜಕೀಯಕ್ಕೆ ಬರಲ್ಲ ಅಂತಾ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿ, ಕೆಲವರು ಶಾಸಕರಾಗಬೇಕು ಅಂತ ಕನಸು ಕಾಣ್ತಿದ್ದಾರೆ, ಸುಮ್ಮನೆ ವದಂತಿ ಹಬ್ಬಿಸ್ತಿದ್ದಾರೆ. ಸಿಎಂ, ಡಿಸಿಎಂ ನಮ್ಮ ಕ್ಷೇತ್ರಕ್ಕೆ ಬಂದಾಗ ಮಾಡಿರುವ ಕೆಲಸದ ಬಗ್ಗೆ ಒಳ್ಳೆ ಮಾತನಾಡಬಾರದು ಅಂದ್ರೆ ಹೇಗೆ? ಅಂತ ವಿರೋಧಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: Gruhalakshmi Scheme: ಆಗಸ್ಟ್ 30ಕ್ಕೆ `ಗೃಹಲಕ್ಷ್ಮಿʼಯರ ಖಾತೆಗೆ ಕಾಂಚಾಣ
ಆರ್‌ಆರ್ ನಗರ, ಕೆಆರ್‌ಪುರದಲ್ಲಿ ಬೆಂಬಲಿಗರು ಕಾಂಗ್ರೆಸ್‌ಗೆ ಹೋದಂತೆ ನನ್ನ ಕ್ಷೇತ್ರದಲ್ಲೂ ಹೋಗಿದ್ದಾರೆ ಅಷ್ಟೇ. ಆದರೆ, ನನ್ನ ಮೇಲ್ಯಾಕೆ ಇಷ್ಟು ಸಂಶಯ? ಅಂತ ಪ್ರಶ್ನಿಸಿದ್ದಾರೆ. ದೆಹಲಿಗೆ ಹೋಗಲು ಇನ್ನೂ ಬುಲಾವ್ ಬಂದಿಲ್ಲ ಅಂತಲೂ ಸೋಮಶೇಖರ್ ಹೇಳಿದ್ದಾರೆ. ಇದನ್ನೂ ಓದಿ: ಪಾಸ್‌ಪೋರ್ಟ್, ವೀಸಾ ಇಲ್ಲದೆ ಬೋಟ್‌ನಲ್ಲಿ ಬೆಂಗಳೂರಿಗೆ ನುಸುಳಿದ್ದ ಶ್ರೀಲಂಕಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳು ಅರೆಸ್ಟ್
ಸೋಮಶೇಖರ್ ಜೊತೆ ಆರ್.ಅಶೋಕ್ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಸೋಮಶೇಖರ್ ಕಾಂಗ್ರೆಸ್‌ಗೆ ಹೋಗಲ್ಲ. ಕಾಂಗ್ರೆಸ್‌ನವರು ಲೋಕಸಭೆಗೆ ಟಿಕೆಟ್ ಆಫರ್ ಕೊಟ್ಟಿದ್ದಾರೆ. ಎಲೆಕ್ಷನ್ ಪರಿಣಾಮ ಏನು ಅಂತ ವಿವರಿಸಿದ್ದೇನೆ. ಬೆಂಬಲಿಗರು ಇಲ್ಲಿ ಟಿಕೆಟ್ ಸಿಗಲ್ಲ ಅಂತ ಹೋಗಿದ್ದಾರೆ. ನಮಗೆ ಮೆಜಾರಿಟಿ ಇಲ್ಲದಿದ್ದಾಗ ಬಿಎಸ್‌ವೈ 10 ಶಾಸಕರನ್ನು, ನಾನು 5 ಶಾಸಕರನ್ನು ಆಪರೇಷನ್ ಮಾಡಿದ್ವಿ. ಕಾಂಗ್ರೆಸ್‌ನವರಿಗೆ ಮೆಜಾರಿಟಿ ಇದ್ರೂ ಯಾಕೆ ಆಪರೇಷನ್ ಮಾಡ್ತಿದ್ದಾರೆ ಅಂತ ಅಶೋಕ್ ಕಿಡಿಕಾರಿದ್ದಾರೆ.
ಈ ನಡುವೆ ಬೈರತಿ ಬಸವರಾಜ್ ಪ್ರತಿಕ್ರಿಯಿಸಿ, ನನಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿಲ್ಲ. ನಾನು ಬಿಜೆಪಿ ಬಿಡಲ್ಲ. ಪಕ್ಷ ಬಿಡುವ ಸಂದರ್ಭ ಬಂದರೆ ನಿವೃತ್ತಿ ಆಗಿ ಮನೆಯಲ್ಲಿ ಇರ್ತೇನೆ ಅಂದಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]