ಟೆಹರಾನ್: 100 ಮಂದಿ ಪ್ರಯಾಣಿಕರಿದ್ದ ಇರಾನ್ ವಿಮಾನವನ್ನು ಅಪಹರಿಸಲು ರೂಪಿಸಿದ್ದ ಸಂಚು ವಿಫಲವಾಗಿದೆ.
ಅಹ್ವಾಜ್‍ನಿಂದ ಮಷಾದ್‍ಗೆ ತೆರಳುತ್ತಿದ್ದ ವಿಮಾನವನ್ನು ಅಪಹರಿಸಲು ಸಂಚು ರೂಪಿಸಿದ್ದ ವ್ಯಕ್ತಿಯನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್(ಐಆರ್‌ಜಿಸಿ) ಬಂಧಿಸಿದೆ.
ಆರೋಪಿ ವಿಮಾನವನ್ನು ಅಪಹರಿಸಿ ಪರ್ಷಿಯನ್ ಕೊಲ್ಲಿಯ ದಕ್ಷಿಣ ತೀರದಲ್ಲಿ ಇಳಿಸಲು ಮುಂದಾಗಿದ್ದ. ಆತನ ಬಳಿ ಇದ್ದ ಪಿಸ್ತೂಲ್ ಅನ್ನು ವಶ ಪಡಿಸಿಕೊಳ್ಳಲಾಗಿದೆ.
ವಿಮಾನವನ್ನು ಇಸ್ಫಾಹಾನ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ರಕ್ಷಿಸಲಾಗಿದೆ. ಪ್ರಯಾಣಿಕರಿಗೆ ಮತ್ತೊಂದು ವಿಮಾನಯಾನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಸದ್ಯ ಘಟನೆ ಕುರಿತಂತೆ ಐಆರ್‌ಜಿಸಿ ತನಿಖೆ ನಡೆಸಲಾರಂಭಿಸಿದೆ.