Connect with us

Corona

100 ರೂ. ಲಂಚ ನೀಡಲು ನಿರಾಕರಿಸಿದ ಬಾಲಕ- ಮೊಟ್ಟೆ ಬಂಡಿ ಪಲ್ಟಿ ಮಾಡಿದ ಪಾಲಿಕೆ ಅಧಿಕಾರಿ

Published

on

-ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

ಇಂದೋರ್: ತಳ್ಳುವ ಬಂಡಿಯಲ್ಲಿ ಮೊಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ 14 ವರ್ಷದ ಬಾಲಕನ ಬಂಡಿಯನ್ನು ಪಲ್ಟಿ ಮಾಡಿ ಅಧಿಕಾರಿ ದರ್ಪ ನಡೆಸಿರುವ ಘಟನೆ ಮಧ್ಯಪ್ರದೇಶ ಇಂದೋರ್ ನಲ್ಲಿ ನಡೆದಿದೆ.

ವ್ಯಾಪಾರ ಮಾಡಲು ಮೊಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದ ಬಾಲಕನ ಬಳಿ ಸ್ಥಳೀಯ ಪಾಲಿಗೆ ಅಧಿಕಾರಿ 100 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇಲ್ಲ ಎಂದರೇ ಬಂಡಿಯನ್ನು ಸ್ಥಳದಿಂದ ತೆಗೆಯುವಂತೆ ಎಚ್ಚರಿಕೆ ನೀಡಿದ್ದ. ಆದರೆ ಲಾಕ್‍ಡೌನ್ ಕಾರಣದಿಂದ ವ್ಯಾಪಾರ ಕಡಿಮೆಯಾಗಿದ್ದರಿಂದ ಬಾಲಕ ಹಣ ನೀಡಲು ನಿರಾಕರಿಸಿದ್ದ. ಇದರಿಂದ ಕುಪಿತಗೊಂಡ ಅಧಿಕಾರಿ ನಡುರಸ್ತೆಯಲ್ಲಿ ಬಾಲಕನ ಬಂಡಿಯನ್ನು ಪಲ್ಟಿ ಮಾಡಿ ಮೊಟ್ಟೆಗಳನ್ನು ನಾಶ ಮಾಡಿದ್ದಾನೆ.

Advertisement
Continue Reading Below

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿದ್ದು, ಬಾಲಕ ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ. ಕೊರೊನಾ ಕಾರಣದಿಂದ ವ್ಯಾಪಾರ ಆಗಿಲ್ಲ. ಅಲ್ಲದೇ ಮೊಟ್ಟೆ ವ್ಯಾಪಾರವಾಗದೆ ಉಳಿದಿರುವುದು ಮತ್ತಷ್ಟು ನಷ್ಟ ತಂದಿದೆ ಎಂದಿದ್ದಾನೆ. ವಿಡಿಯೋದಲ್ಲಿ ಬಾಲಕನ ಬಳಿ ನಿಂತಿರುವ ವ್ಯಕ್ತಿಯನ್ನು ಪಾಲಿಕೆ ಅಧಿಕಾರಿ ಎಂದು ಗುರುತಿಸಲಾಗಿದೆ.

ಇಂದೋರ್ ನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ವ್ಯಾಪಾರಕ್ಕೆ ನಿಷೇಧ ವಿಧಿಸಿದ್ದ ಸರ್ಕಾರ ಇತ್ತೀಚೆಗೆ ನಿಯಮಗಳನ್ನು ಸಡಿಲಗೊಳಿಸಿತ್ತು. ಇಂದೋರ್ ನಲ್ಲಿ ನಿನ್ನೆ 118 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 6,457 ಮಂದಿಗೆ ಇದುವರೆಗೂ ಸೋಂಕು ಹರಡಿದೆ.

Click to comment

Leave a Reply

Your email address will not be published. Required fields are marked *