ಬೆಂಗಳೂರು: 100 ನಾಟೌಟ್ ಹೆಸರಿನಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.
ಪೆಟ್ರೋಲ್ ದರ 100 ರೂ. ಆಗಿದ್ದನ್ನು ಖಂಡಿಸಿ 100 ನಾಟ್ ಔಟ್ ಪ್ರತಿಭಟನೆ ನಡೆಸಲಾಯಿತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವುದನ್ನು ಖಂಡಿಸಿ ರಾಜ್ಯದ 5 ಸಾವಿರ ಪೆಟ್ರೋಲ್ ಬಂಕ್ ಗಳ ಮುಂದೆ ಕಾಂಗ್ರೆಸ್ ನಾಯಕರು 5 ದಿನಗಳ ಕಾಲ ಪ್ರತಿಭಟನೆ ನಡೆಸಲಿದ್ದಾರೆ.
Advertisement
ಏರುತ್ತಿರುವ ತೆರಿಗೆಯಿಂದಾಗಿ ಪ್ರತಿ ಲೀಟರ್ ಪೇಟ್ರೋಲ್ 100 ರೂ.ದಾಟಿದೆ.
ಕರ್ನಾಟಕದಲ್ಲಿ ಬಿಜೆಪಿಯು ವಿದ್ಯುತ್ ಬೆಲೆಯನ್ನೂ ಏರಿಸಿದೆ.
ನೀವು ಒಳಗಿರಿ ಅಥವಾ ಹೊರಗಿರಿ, ಬಿಜೆಪಿಯು ನಿಮ್ಮ ಜೇಬನ್ನು ಖಾಲಿ ಮಾಡುತ್ತದೆ.
ಇದನ್ನು ಮೌನವಾಗಿ ನೀವು ಸಹಿಸುವಿರಾ?#Petrol100NotOut
— DK Shivakumar (@DKShivakumar) June 11, 2021
Advertisement
ಬೆಂಗಳೂರು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶೇಷಾದ್ರಿಪುರಂನ ಶಿವಾನಂದ ಸರ್ಕಲ್ ಸಮೀಪದ ರೆಡ್ಡಿ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Advertisement
ಮೋದಿಯವರ ಹೊಸ ಮಹಲನ್ನು ಕಟ್ಟಲು ಬಿಜೆಪಿಯು ಇಂಧನ ತೆರಿಗೆ ಹೆಚ್ಚಿಸುತ್ತಿರುವಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಹೀಗೂ ಆಗಬಹುದು:
2022: ಪೆಟ್ರೋಲ್ @ 120 ರೂ.
2023: ಪೆಟ್ರೋಲ್ @ 160 ರೂ.
2024: ಪೆಟ್ರೋಲ್ @ 200 ರೂ.
ಕೈಮೀರಿ ಹೋಗುವ ಮೊದಲು ಮಾತಾಡಿ.#Petrol100NotOut
— DK Shivakumar (@DKShivakumar) June 11, 2021
Advertisement
ಇಂದಿನಿಂದ 5 ದಿನಗಳ ಕಾಲ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿದಿನ ಒಂದು ಗಂಟೆ ಕಾಲ ಬೇರೆ ಬೇರೆ ಪೆಟ್ರೋಲ್ ಬಂಕ್ ಮುಂದೆ ಕೈ ನಾಯಕರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
https://twitter.com/siddaramaiah/status/1403224290678362114
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆದ ಪೊಲೀಸರು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ದು ಆನಂತರ ಬಿಡುಗಡೆ ಮಾಡಿದರು.