– ಫಿಕ್ಸ್ ಆಗಿದ್ದ ತಂಗಿ ಮದ್ವೆಯೂ ಕ್ಯಾನ್ಸಲ್
ಮೈಸೂರು: ತಂಗಿ ಮದುವೆ ರದ್ದು ಹಾಗೂ ಇತ್ತ ತನ್ನ ಲವ್ ಕೂಡ ಫೇಲ್ ಆಗಿರುವುದರಿಂದ ಮನನೊಂದು ಭಗ್ನ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿಜಯಶ್ರೀಪುರದಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಚೇತನ್ ಶರ್ಮ(29) ಎಂದು ಗುರುತಿಸಲಾಗಿದೆ. ಡಿಪ್ಲಮೋ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದ ಚೇತನ್, ಮೂಲತಃ ಬೆಂಗಳೂರು ನಿವಾಸಿ. ಈತ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದನು.
ಈತ 10 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಇದೀಗ ಲವ್ ಫೇಲ್ ಆಗಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಇತ್ತೀಚೆಗಷ್ಟೇ ಫಿಕ್ಸ್ ಆಗಿದ್ದ ತಂಗಿ ಮದುವೆ ಕೂಡ ರದ್ದಾಗಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಚೇತನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಅಲ್ಲದೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.