ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ವಿವಾಹಿತನಿಗೆ 10 ವರ್ಷ ಜೈಲು, 25 ಸಾವಿರ ದಂಡ

Public TV
1 Min Read
chamrajnagara man arristed

ಚಾಮರಾಜನಗರ: ಅಪ್ರಾಪ್ತೆ ಜೊತೆ ಬಲವಂತದ ಲೈಂಗಿಕಕ್ರಿಯೆ ನಡೆಸಿ ಗರ್ಭವತಿ ಮಾಡಿದ್ದ ವಿವಾಹಿತನಿಗೆ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ 10 ವರ್ಷ ಜೈಲು, 25 ಸಾವಿರ ರೂ. ಶಿಕ್ಷೆ ವಿಧಿಸಲು ಆದೇಶಿದ್ದಾರೆ.

ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಚಂದ್ರ(29) ಶಿಕ್ಷೆಗೊಳಗಾದ ಅಪರಾಧಿ. ಚಂದ್ರನಿಗೆ ಮದುವೆಯಾಗಿ ಮೂರು ಮಕ್ಕಳಿದ್ದರೂ, ಅಪ್ರಾಪ್ತೆಯೊಬ್ಬಳನ್ನು ಪರಿಚಯ ಮಾಡಿಕೊಂಡು ಪುಸಲಾಯಿಸಿ ಬಲವಂತದ ಲೈಂಗಿಕಕ್ರಿಯೆ ನಡೆಸಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 10 ವರ್ಷ ಸಜೆ ಹಾಗೂ ಈ ಸಜೆಯಲ್ಲಿ 1 ತಿಂಗಳು ಕಠಿಣ ಶಿಕ್ಷೆ, 25 ಸಾವಿರ ರೂ. ದಂಡವನ್ನು ನ್ಯಾಯಾಧೀಶರು ವಿಧಿಸಿದ್ದಾರೆ.  ಇದನ್ನೂ ಓದಿ: ಅಬುಧಾಬಿಯಲ್ಲಿ 44.75 ಕೋಟಿ ರೂ. ಲಾಟರಿ ಗೆದ್ದ ಭಾರತೀಯ ಮಹಿಳೆ!

crime

17 ವರ್ಷದ ಬಾಲಕಿ ಊರಿಗೆ ಚಂದ್ರ ಕೂಲಿ ಕೆಲಸಕ್ಕೆ ಹೋಗುತ್ತಿದ್ದನು. ಈ ವೇಳೆ ಚಂದ್ರನು ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಅಲ್ಲದೆ ತನಗೆ ಮದುವೆಯಾಗಿರುವುದನ್ನು ಮುಚ್ಚಿಟ್ಟು ವಿವಿಧ ಆಮಿಷಗಳನ್ನು ತೋರಿಸಿ 2015ರ ನವೆಂಬರ್‍ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದನು.

arristted man chamarajnagara

ಇಷ್ಟೇ ಅಲ್ಲದೇ, ಆಕೆಯ ಕೊರಳಿಗೆ ಅರಿಶಿಣ ದಾರವೊಂದನ್ನು ಕಟ್ಟಿ ಬಲವಂತದಿಂದ ಲೈಂಗಿಕಕ್ರಿಯೆ ನಡೆಸಿ ಗರ್ಭಿಣಿಯನ್ನಾಗಿಸಿದ್ದಾನೆ ಎಂದು ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಪ್ರಕರಣ ದಾಖಲಾಗಿ ಈತನನ್ನು ಬಂಧಿಸಲಾಗಿತ್ತು.

POLICE JEEP

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಯೋಗೇಶ್ ವಿಚಾರಣೆ ಮಂಡಿಸಿ ವಾದ ಮಾಡಿದ್ದರು. ಇಂದು ಈ ಕೇಸ್‍ಗೆ ಮುಕ್ತಿ ಸಿಕ್ಕಿದ್ದು, ಅಪರಾಧಿಗೆ ಶಿಕ್ಷೆಯಾಗಿದೆ. ಇದನ್ನೂ ಓದಿ: ಕೃಷಿ ವಲಯವನ್ನು ರಕ್ಷಿಸಲು, ಬಲಪಡಿಸಲು ಡಿಜಿಟಲ್ ಕೃಷಿ, ಹವಾಮಾನ ಕ್ರಮ: ಮೋದಿ

Share This Article
Leave a Comment

Leave a Reply

Your email address will not be published. Required fields are marked *