ಹುಟ್ಟುಹಬ್ಬಕ್ಕೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಕೇಕ್‌ ತಿಂದು 10ರ ಬಾಲಕಿ ಸಾವು

Public TV
1 Min Read
10 year old Punjab girl dies after eating her birthday cake ordered online 2

ಚಂಡೀಗಢ: ಹುಟ್ಟುಹಬ್ಬ (Birth Day) ಆಚರಣೆಗೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಕೇಕ್‌ ತಿಂದು 10 ವರ್ಷದ ಬಾಲಕಿ (10-year-old girl) ಮೃತಪಟ್ಟ ಘಟನೆ ಪಂಜಾಬ್‌ನ ಪಟಿಯಾಲದಲ್ಲಿ (Punjab’s Patiala) ನಡೆದಿದೆ.

ಕಳೆದ ವಾರ ಪಂಜಾಬ್‌ನಲ್ಲಿ 10 ವರ್ಷದ ಬಾಲಕಿ ಮಾನ್ವಿ ಹುಟ್ಟುಹಬ್ಬದಂದು ಕೇಕ್ (Cake) ಸೇವಿಸಿದ ಮೃತಪಟ್ಟಿದ್ದಳು. ಈಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಆನ್‌ಲೈನ್‌ನಲ್ಲಿ(Online) ಆರ್ಡರ್‌ ಮಾಡಿದ ಕೇಕ್‌ ಸೇವಿಸಿ ಆಕೆ ಮೃತಪಟ್ಟಿದ್ದಾಳೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ. ಕೇಕ್‌ ತಯಾರಿಸಿದ ಬೇಕರಿ ಮಾಲೀಕನ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಕೋಟೆಗೆ ಅಮಿತ್ ಶಾ ಎಂಟ್ರಿ – ಚನ್ನಪಟ್ಟಣದಲ್ಲಿ ರೋಡ್ ಶೋ

10 year old Punjab girl dies after eating her birthday cake ordered online 1

ಮೃತ ದೇಹದ ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಚಾಕಲೇಟ್‌ ಕೇಕ್‌ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾನ್ವಿ ಅವರ ಕೇಕ್ ಕತ್ತರಿಸುವ ಮತ್ತು ಆಕೆ ಕುಟುಂಬದೊಂದಿಗೆ ಹುಟ್ಟುಹಬ್ಬದ ಆಚರಣೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದೆ. ಇದನ್ನೂ ಓದಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು INDIA ಒಕ್ಕೂಟದ ಒಗ್ಗಟ್ಟು ಪ್ರದರ್ಶನ

ಏನಿದು ಘಟನೆ?
ಮಾನ್ವಿಯ ಹುಟ್ಟುಹಬ್ಬದ ಆಚರಣೆಗೆ ಆನ್‌ಲೈನ್‌ನಲ್ಲಿ ಕೇಕ್‌ ಆರ್ಡರ್‌ ಮಾಡಲಾಗಿತ್ತು. ಮಾರ್ಚ್ 24 ರಂದು ರಾತ್ರಿ 7 ಗಂಟೆಯ ವೇಳೆ ಮಾನ್ವಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಳು. ಅಂದು ರಾತ್ರಿ 10 ಗಂಟೆಯ ವೇಳೆ ಮಾನ್ವಿಯ ಇಡೀ ಕುಟುಂಬವೇ ಅಸ್ವಸ್ಥಗೊಂಡಿತು.

ಇಬ್ಬರು ಸಹೋದರಿಯರು ಸ್ವಲ್ಪ ಸಮಯದ ನಂತರ ವಾಂತಿ ಮಾಡಲು ಆರಂಭಿಸಿದರು. ರಾತ್ರಿ ಮಾನ್ವಿ ನನಗೆ ಬಹಳ ಬಾಯಾರಿಕೆ ಆಗುತ್ತಿದೆ. ಬಾಯಿ ಒಣಗುತ್ತಿದೆ ಎಂದು ಹೇಳಿ ಅನೇಕ ಬಾರಿ ನೀರು ಕೇಳಿ ಮಲಗುತ್ತಿದ್ದಳು.

ಅಸ್ವಸ್ಥಗೊಂಡಿದ್ದ ಮಾನ್ವಿಯ ಆರೋಗ್ಯ ಮರುದಿನ ಬೆಳಗ್ಗೆ ಏರುಪೇರಾಯ್ತು. ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೂಡಲೇ ಇಸಿಜಿ ಮಾಡಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾನ್ವಿ ಅಂದೇ ಮೃತಪಟ್ಟಳು.

 

Share This Article