ಭೋಪಾಲ್: ಜೈ ಶ್ರೀ ರಾಮ್ (Jai Shri Ram) ಎಂದು ಘೋಷಣೆ ಕೂಗಲು ನಿರಾಕರಿಸಿದ 10 ವರ್ಷದ ಮುಸ್ಲಿಂ ಬಾಲಕನಿಗೆ (Muslim Boy) ಥಳಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ಕೋಮು ಸೂಕ್ಷ್ಮ ಪ್ರದೇಶವಾಗಿರುವ ಖಾಂಡ್ವಾ (Khandwa) ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಘಟನೆಯ ಬಳಿಕ ಪೊಲೀಸರು ಆರೋಪಿ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಗುರುವಾರ ಸಂಜೆ ಖಾಂಡ್ವಾದ ಪಂಧನಾ ಪ್ರದೇಶದಲ್ಲಿ ಬಾಲಕ ಅಭ್ಯಾಸಕ್ಕೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಅಜಯ್ ಭಿಲ್ ಎಂದು ಗುರುತಿಸಲಾದ ಆರೋಪಿ ಬಾಲಕನನ್ನು ತಡೆದು ಜೈ ಶ್ರೀ ರಾಮ್ ಎಂದು ಹೇಳಲು ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದ ಪಂಚರತ್ನ ಯಾತ್ರೆಯ 500 ಬಗೆಯ ಹಾರಗಳು
Advertisement
Advertisement
ಆರಂಭದಲ್ಲಿ ಬಾಲಕ ಜೈ ಶ್ರೀ ರಾಮ್ ಎನ್ನಲು ನಿರಾಕರಿಸಿದ್ದಾನೆ. ಇದಕ್ಕೆ ಕೋಪಗೊಂಡ ವ್ಯಕ್ತಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಭಯಭೀತನಾದ ಬಾಲಕ ಘೋಷಣೆ ಕೂಗಿದ್ದು, ಬಳಿಕ ಆರೋಪಿ ಆತನನ್ನು ಹೋಗಲು ಬಿಟ್ಟಿದ್ದಾನೆ.
Advertisement
ನಡೆದೆಲ್ಲಾ ಘಟನೆಯ ಬಗ್ಗೆ ಬಾಲಕ ಬಳಿಕ ತನ್ನ ಪೋಷಕರಿಗೆ ತಿಳಿಸಿದ್ದಾನೆ. ಬಾಲಕನ ತಂದೆ ಪಂಧನಾ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಅಜಯ್ ಭಿಲ್ ವಿರುದ್ಧ ಐಪಿಸಿ ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳಿಗೆ ಆಕ್ರೋಶ ಅಥವಾ ಅವಮಾನ) ಹಾಗೂ 323 (ಸ್ವಯಂಪ್ರೇರಿತನಾಗಿ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯಿಂದ 113 ಬಾರಿ ಭದ್ರತಾ ನಿಯಮ ಉಲ್ಲಂಘನೆ: CRPF