ಬಳ್ಳಾರಿ: ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲ್ಲೂಕಿನ ಬಂಡಿಹಳ್ಳಿಯಲ್ಲಿ ನಡೆದಿದೆ.
ಪೃಥ್ವಿ (10) ಮೃತ ಬಾಲಕ. ಶಿಕ್ಷಕ ಯು.ಗೋಣಿಬಸಪ್ಪ ಎಂಬುವವರ ಪುತ್ರನಾಗಿದ್ದು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಿಬಿಎಸ್‌ಇ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಗುಟ್ಕಾ-ಪಾನ್ ಮಸಾಲ ತಯಾರಕರಿಗೆ ಶಾಕ್ ಕೊಡಲು ಕೇಂದ್ರ ಸಜ್ಜು – ಹೊಸ ಮಸೂದೆಯಿಂದ ಬೆಲೆ ಏರಿಕೆ ಆತಂಕ!
ತರಗತಿಯ ಐದು ಜನ ಸ್ನೇಹಿತರೊಂದಿಗೆ ಸೇರಿ ಬಂಡಿಹಳ್ಳಿಯ ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಪೃಥ್ವಿ ಹಾಗೂ ಇನ್ನೋರ್ವ ಬಾಲಕ ಆಕಾಶ್ ನೀರಿನಲ್ಲಿ ಮುಳುಗುತ್ತಿದ್ದರು. ಇದನ್ನು ಗಮನಿಸಿದ ಕುರಿಗಾಹಿಗಳು ಆಕಾಶ್ ಅನ್ನು ರಕ್ಷಿಸಿದ್ದು, ಪೃಥ್ವಿ ಮೃತಪಟ್ಟಿದ್ದಾನೆ. ಈ ಸಂಬಂಧ ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

