ಹುಬ್ಬಳ್ಳಿ: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರೋಡ್ ಶೋ (Road Show) ನಡೆಸಿದ್ದು, ಈ ವೇಳೆ ಭದ್ರತಾ ಲೋಪವಾಗಿರುವ (Security Breach) ವರದಿ ಕೇಳಿಬಂದಿತ್ತು. ಪ್ರಧಾನಿಯೆಡೆಗೆ ಹೂ ಹಿಡಿದುಕೊಂಡು ಬಂದಿದ್ದು 10 ವರ್ಷದ ಬಾಲಕನಾಗಿದ್ದ (Boy). ಆದರೆ ಇಲ್ಲಿ ಯಾವುದೇ ರೀತಿಯ ಭದ್ರತಾ ಲೋಪ ಆಗಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
Advertisement
ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಬ್ಯಾರಿಕೇಡ್ ಹಾರಿದ್ದ ಬಾಲಕ ಮೋದಿಯನ್ನು ನೋಡಿದ ಉತ್ಸಾಹದಲ್ಲಿ ಈ ರೀತಿ ಮಾಡಿದ್ದಾನೆ. ಈ ರೀತಿ ಲಕ್ಷಾಂತರ ಜನರು ಸೇರುವ ಸಂದರ್ಭ ಬ್ಯಾರಿಕೇಡ್ ಹಾರುವಂತಹ ಘಟನೆ ಸಾಮಾನ್ಯ. ಆತ ಸಣ್ಣ ಬಾಲಕನಾಗಿದ್ದರಿಂದ ಬಹುಶಃ ಆತನ ತಿಳುವಳಿಕೆ ತಪ್ಪಿ ಈ ರೀತಿ ಮಾಡಿದ್ದಾನೆ. ಇಲ್ಲಿ ಯಾವುದೇ ಭದ್ರತಾ ಲೋಪ ಆಗಿಲ್ಲ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಘಟನೆಯೇನು?
ಪ್ರಧಾನಿ ಮೋದಿ ರೋಡ್ ಶೋ ವೇಳೆ ಒಂದು ಕ್ಷಣ ಆತಂಕದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಮೋದಿ ರೋಡ್ ಶೋ ನಡೆಯುವಾಗ ಇದ್ದಕ್ಕಿದ್ದಂತೆ ಬ್ಯಾರಿಕೇಡ್ ಹಾರಿದ ಬಾಲಕನೊಬ್ಬ ಮೋದಿಗೆ ಹೂವಿನ ಹಾರ ಹಾಕಲು ಮುಂದಾಗಿದ್ದ. ಆದರೆ ಇದರಿಂದ ಏನೂ ಗಾಬರಿಗೊಳ್ಳದ ಮೋದಿ, ನಗುನಗುತ್ತಲೇ ಹೂವಿನ ಹಾರವನ್ನು ತೆಗೆದುಕೊಂಡಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರನ್‌ವೇ ಸಿದ್ದವಾಗಿದೆ, ಕೌಶಲ್ಯಗಳನ್ನು ಕಲಿತು ಟೇಕಾಫ್ ಆಗಿ – ಯುವ ಜನತೆಗೆ ಮೋದಿ ಕರೆ
Advertisement
ಘಟನೆ ನಡೆದ ತಕ್ಷಣವೇ ಬಾಲಕನನ್ನು ಎಸ್‌ಪಿಜಿ ಸಿಬ್ಬಂದಿ ಹುಬ್ಬಳ್ಳಿ ಪೊಲೀಸರ ಕೈಗೆ ಒಪ್ಪಿಸಿದ್ದರು. ಈ ಘಟನೆಯನ್ನು ಗೃಹ ಇಲಾಖೆ ಗಂಭಿರವಾಗಿ ಪರಿಗಣಿಸಿದೆ ಹಾಗೂ ಸಮಗ್ರ ವರದಿ ಕೇಳಿದೆ. ಇತ್ತ ಗೋಕುಲ ಠಾಣೆ ಪೊಲೀಸರು, ತೊರವಿಹಕ್ಕಲದ 10 ವರ್ಷದ ಬಾಲಕ ಕುನಾಲ್ ಸುರೇಶ್‌ನನ್ನು ಅವರ ಪೋಷಕರ ಸಮ್ಮುಖದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಯುವಕ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k