ಬೆಂಗಳೂರು: ಒಂದು ವರ್ಷದ ಶಾಲಾ ಶುಲ್ಕ ಕಟ್ಟುವುದರಲ್ಲೇ ಪೋಷಕರು ಹೈರಾಣಾಗುತ್ತಾರೆ. ಅಂತಹದರಲ್ಲಿ ಖಾಸಗಿ ಶಾಲೆಗಳು ಈಗಲೇ 10 ವರ್ಷದ ಮುಂಗಡ ಶುಲ್ಕ ಕಟ್ಟಲು ಆಫರ್ ನೀಡಿದೆ. ಆದರೆ ಬೆಂಗಳೂರಿನ ನಯಾ ಟ್ರೆಂಡ್‍ಗೆ ಪೋಷಕರು ಸುಸ್ತು ಹೊಡೆದಿದ್ದಾರೆ.
ಹೌದು.. ಬೆಂಗಳೂರಿನ (Bengaluru) ಖಾಸಗಿ ಶಾಲೆಗಳಲ್ಲಿ (Private School) 10 ವರ್ಷದ ಶುಲ್ಕವನ್ನು ಮುಂಗಡವಾಗಿ ಕಟ್ಟಬಹುದು. ಇದು ಕಡ್ಡಾಯವಲ್ಲ. ಆದರೆ ಇಷ್ಟವಿದ್ದ ಪೋಷಕರು ಇದನ್ನು ಕಟ್ಟಬಹುದು. 10 ವರ್ಷಕ್ಕೆ 20 ಲಕ್ಷ ರೂ. ಕಟ್ಟಿ ಅಡ್ವಾನ್ಸ್ ಫೀಸ್ ಕಟ್ಟಬಹುದು. 1 ರಿಂದ 10ನೇ ತರಗತಿಯವರೆಗೆ ಮುಂಗಡವಾಗಿ ದಾಖಲಾತಿ ಮಾಡಿಸಬಹುದು. ಹಣ ಮುಂಗಡ ಪಾವತಿ ಮಾಡಿದ್ರೆ, ಫೀಸ್ ಹೆಚ್ಚಳದ ಬಿಸಿ ತಟ್ಟಲ್ಲ ಅಂತ ಶಾಲೆ ಸುತ್ತೋಲೆ ಹೊರಡಿಸಿದೆ.
Advertisement
Advertisement
ಉದಾಹರಣೆಗೆ ಒಂದು ಮಗುವಿಗೆ ವರ್ಷಕ್ಕೆ 2 ಲಕ್ಷ ಫೀಸ್ ಅಂದ್ರೆ, 10 ವರ್ಷಕ್ಕೆ 20 ಲಕ್ಷದಲ್ಲಿ ಮಗುವಿನ ಶಿಕ್ಷಣ ಮುಗಿದು ಹೋಗುತ್ತದೆ. ಈ ಆಫರ್ ಸ್ವೀಕಾರ ಮಾಡಿಲ್ಲ ಅಂದ್ರೆ ಒನ್ ಟು ಡಬಲ್ ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿ ಪೋಷಕರ ಸೆಳೆಯುವ ಯತ್ನ ಮಾಡುತ್ತಿದೆ.
Advertisement
ಈ ವಿಚಾರಕ್ಕೆ ಸಂಬಂಧ ಪೋಷಕರ ಧ್ವನಿಯಾಗಿ ವಾಯ್ಸ್ ಆಫ್ ಪೇರೆಂಟ್ಸ್ ಅಸೋಸಿಯೇಶನ್ ಆಕ್ರೋಶ ವ್ಯಕ್ತಪಡಿಸಿದೆ. 10 ವರ್ಷ ಒಂದೇ ಶಾಲೆಯಲ್ಲಿ ಮಕ್ಕಳನ್ನು ಕಟ್ಟಿ ಹಾಕಿದ ಹಾಗೇ ಆಗುತ್ತದೆ. ಶಿಕ್ಷಣದಲ್ಲಿ ವ್ಯಾಪಾರೀಕರಣವಾದರೆ ಮೌಲ್ಯಾಧಾರಿತ ಶಿಕ್ಷಣ ಹೇಗೆ ಕೊಡ್ತಾರೆ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಯುವತಿ ಪಾಕ್‌ಗೆ ಗಡೀಪಾರು
Advertisement
ಸಂಸ್ಥೆ ಮುಂಗಡ ದುಡ್ಡು ಕಟ್ಟಿದ್ರು, ಮಗು ಶಾಲೆ ಬಿಟ್ರೆ ದುಡ್ಡು ವಾಪಸ್ ಕೊಡುವ ಭರವಸೆ ಸಂಸ್ಥೆ ಕೊಡುತ್ತಿದೆ. ಆದರೆ ಎಷ್ಟು ಹಣ ವಾಪಸ್ ಕೊಡ್ತಾರೆ ಅನ್ನೋ ಬಗ್ಗೆ ಸ್ಪಷ್ಟನೆ ಇಲ್ಲ ಅಂತ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ರೀತಿ ಫೀಸ್ ಕಲೆಕ್ಷನ್ ಮಾಡಬಹುದಾ ಏನು ಎನ್ನುವದರ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆಯನ್ನು ಕೂಡ ಕೊಟ್ಟಿಲ್ಲ. ಪೋಷಕರು ಮಾತ್ರ ಈ ಆಫರ್ ನೋಡಿ ಸುಸ್ತಾಗಿದ್ದಾರೆ. ಇದನ್ನೂ ಓದಿ: ಕುತೂಹಲಕ್ಕೆ ಕಾರಣವಾಯ್ತು ಕರಾವಳಿ ಸ್ವಾಮೀಜಿಗಳ ಜೊತೆಗಿನ ನಡ್ಡಾ ಸಭೆ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k