1. ಪಾರ್ಟಿ ಶೂ
Advertisement
ನಿಮ್ಮ ಬಳಿ ಎಷ್ಟೇ ಫ್ಲಾಟ್ ಚಪ್ಪಲಿ ಹಾಗೂ ಸ್ನೀಕರ್ ಶೂಗಳಿದ್ರೂ ಒಂದಾದ್ರೂ ಹೀಲ್ಡ್ ಶೂ ನಿಮ್ಮ ವಾರ್ಡ್‍ರೋಬ್‍ನಲ್ಲಿ ಇರಲೇಬೇಕು. ನೀವು ಪಾರ್ಟಿ ಪ್ರಿಯರಲ್ಲದಿದ್ರೂ ಯಾವುದಾದ್ರೂ ಸಮಾರಂಭಕ್ಕೆ ಹೋಗುವಾಗ ಈ ಶೂ ಬಳಸಬಹುದು. ಸಾಂಪ್ರದಾಯಿಕ ಉಡುಗೆ ಹಾಗೂ ವೆಸ್ಟರ್ನ್ ಡ್ರೆಸ್ ಎರಡಕ್ಕೂ ಮ್ಯಾಚ್ ಆಗವಂತಹ ಶೂ ಆಯ್ಕೆ ಮಾಡಿಕೊಳ್ಳಿ.
Advertisement
2. ಕೂಲ್ ಕೂಲ್ ಪೈಜಾಮಾ
Advertisement
Advertisement
ಯಾವುದೇ ಬಟ್ಟೆ ಸ್ವಲ್ಪ ಹಳೆಯದಾದ್ಮೇಲೆ ಅದನ್ನ ಮನೆಯಲ್ಲಿ ಹಾಕೊಳ್ಳೋಕೆ ಬಳಸ್ತೀವಿ. ಆದ್ರೆ ಕೆಲವೊಂದು ಉಡುಪುಗಳು ಬಿಗಿಯಾಗಿರಬಹುದು ಅಥವಾ ಅದರಲ್ಲಿ ಬೀಡ್ಸ್ ವರ್ಕ್ ಇದ್ರೆ ಮೈಗೆ ಚುಚ್ಚಬಹುದು. ಇದರಿಂದ ಮಲಗುವಾಗ ಕಿರಿಕಿರಿಯಾಗುತ್ತೆ. ಹೀಗಾಗಿ ಮನೆಯಲ್ಲೂ ಕೂಲ್ ಆಗಿರೋಕೆ ಆರಾಮದಾಯಕವಾದ ಪೈಜಾಮಾ ನಿಮ್ಮ ವಾರ್ಡ್‍ರೋಬ್‍ನಲ್ಲಿರಲಿ.
3. ಆರಾಮದಾಯಕ ಒಳಉಡುಪುಗಳು
20 ವರ್ಷ ಪ್ರಾಯದಲ್ಲಿ ಹೆಣ್ಣುಮಕ್ಕಳಿಗೆ ದೈಹಿಕವಾಗಿ ಸಾಕಷ್ಟು ಬದಲಾವಣೆಯಾಗುತ್ತದೆ. ಹೀಗಾಗಿ ಉತ್ತಮ ಗುಣಮಟ್ಟದ ಒಳಉಡುಪುಗಳನ್ನ ಕೊಳ್ಳೊದು ತುಂಬಾ ಮುಖ್ಯ. ಅಲ್ಲದೆ ಯಾವುದೇ ಉಡುಪು ಚೆನ್ನಾಗಿ ಕಾಣಬೇಕಾದ್ರೆ ಅದಕ್ಕೆ ತಕ್ಕಂತಹ ಒಳಉಡುಪು ಕೂಡ ತುಂಬಾ ಮುಖ್ಯ. ಚೆಂದದ ಬಟ್ಟೆ ತೊಟ್ಟು ಒಳಉಡುಪು ಸರಿಯಿಲ್ಲವಾದ್ರೆ ಮುಜುಗರ ಅನುಭವಿಸಬೇಕಾಗುತ್ತೆ. ಸೋ… ನಿಮಗೆ ಫಿಟ್ ಆಗುವಂತಹ ಒಳಉಡುಪನ್ನ ಖರೀದಿಸಿ.
Read More: 15 Ideal Color Combinations to Make You Look Great
4. ಮಾಯ್‍ಶ್ಚರೈಸರ್/ಸನ್‍ಸ್ಕ್ರೀನ್
ನಿಮ್ಮ ಮುಖಕ್ಕೆ ಹೊಂದಿಕೆಯಾಗುವಂತಹ ಒಂದೊಳ್ಳೆ ಮಾಯ್‍ಶ್ಚರೈಸರ್ ಆಯ್ಕೆ ಮಾಡಿಕೊಳ್ಳೋದು ಸುಲಭದ ಮಾತಲ್ಲ. ಇದಕ್ಕಾಗಿ ತುಂಬಾ ಸಹನೆ ಇರಬೇಕು. ಸಾಕಷ್ಟು ಮಾಯ್‍ಶ್ಚರೈಸರ್‍ಗಳನ್ನ ಪ್ರಯೋಗ ಮಾಡ್ಬೇಕು. 20ರ ಹರೆಯದಲ್ಲಿ ಹಾರ್ಮೋನ್‍ಗಳ ವ್ಯತ್ಯಾಸದಿಂದ ಮುಖದಲ್ಲಿ ಮೊಡವೆಯಾಗೋದು ಹಾಗೂ ಇತರೆ ತೊಂದರೆಗಳು ಕಾಮನ್. ಹೀಗಾಗಿ ನಿಮ್ಮ ಮುಖಕ್ಕೆ ಹೊಂದಿಕೆಯಾಗೋ ಮಾಯ್‍ಶ್ಚರೈಸರ್ ಆಯ್ಕೆ ಮಾಡಿ ಅದನ್ನೇ ಬಳಸಿ. ನಿಮ್ಮದು ಎಣ್ಣೆ ತ್ವಚೆಯಾಗಿದ್ರೆ ವಾಟರ್ ಬೇಸ್ಡ್ ಮಾಯ್‍ಶ್ಚರೈಸರ್ ಹಾಗೂ ಡ್ರೈ ಸ್ಕಿನ್ ಆಗಿದ್ರೆ ಕ್ರೀಮ್ ಬೇಸ್ಡ್ ಮಾಯ್‍ಶ್ಚರೈಸರ್ ಬಳಸಿ. ಕೈ ಕಾಲುಗಳಿಗೂ ಮಾಯ್‍ಶ್ಚರೈಸರ್ ಬಳಸಿ. ಇನ್ನು ಸನ್‍ಸ್ಕ್ರೀನ್ ತಪ್ಪದೆ ಪ್ರತಿದಿನ ಬಳಸಿ. ಎಸ್‍ಪಿಎಫ್(ಸನ್ ಪ್ರೊಟೆಕ್ಷನ್ ಫಾರ್ಮುಲಾ) 25ಕ್ಕಿಂತ ಹೆಚ್ಚಿರುವ ಸನ್‍ಸ್ಕ್ರೀನ್ ಬಳಸಿದ್ರೆ ಉತ್ತಮ.
5. ಕೂದಲಿಗೆ ತಕ್ಕ ಬಾಚಣಿಗೆ
ಒಂದೇ ಬಾಚಣಿಗೆಯನ್ನ ಮನೆಮಂದಿಯೆಲ್ಲಾ ಬಳಸೋ ಕಾಲ ಹೋಯ್ತು. ಈಗ ನಿಮಗೆ ಅಂತ ಪ್ರತ್ಯೇಕವಾದ ಬಾಚಣಿಗೆ ಇಟ್ಟುಕೊಳ್ಳಲೇಬೇಕು. ಅದರಲ್ಲೂ ಕೂದಲಿನ ಸಿಕ್ಕು ಬಿಡಿಸೋಕೆ ಹಾಗೂ ಬಾಚಿ ಜಡೆ ಹಾಕೋಕೆ ಒಂದೇ ಬಾಚಣಿಗೆ ಸಾಕಾಗುವುದಿಲ್ಲ. ಸಿಕ್ಕು ಬಿಡಿಸೋಕೆ ಯಾವಾಗ್ಲೂ ದೊಡ್ಡ ಹಲ್ಲಿನ ಬಾಚಣಿಗೆ ಬಳಸಿ. ನಂತರ ಸಣ್ಣ ಬಾಚಣಿಗೆಯಲ್ಲಿ ಬಾಚಿಕೊಂಡು ಜಡೆ ಅಥವಾ ಕ್ಲಿಪ್ ಹಾಕಿ. ನಿಮ್ಮದು ಸ್ಟ್ರೇಟ್ ಹೇರ್ ಆಗಿದ್ರೆ ಬ್ರಶ್‍ನಂತಿರುವ ಬಾಚಣಿಗೆ ಬಳಸಿ. ಹಾಗೇ ಕರ್ಲಿ ಹೇರ್ ಆಗಿದ್ರೆ ಬ್ರಶ್‍ನಲ್ಲಿ ಬಾಚಿದ್ರೆ ಕೂದಲು ದೊಡ್ಡದಾಗಿ ವಿಗ್‍ನಂತೆ ಕಾಣುತ್ತದೆ. ಹೀಗಾಗಿ ಕರ್ಲಿ ಹೇರ್ ಇರೋರು ದೊಡ್ಡ ಹಲ್ಲಿನ ಬಾಚಣಿಗೆಯಲ್ಲೇ ಬಾಚಿದ್ರೆ ಸೂಕ್ತ. ರೌಂಡ್ ಕೂಂಬ್ ಕೂಡ ಬಳಸಬಹುದು.
Read More: The 6 Best Affordable Brands to Boost Your Office Dressing Game
6. ಸ್ಕಿನ್ನಿ ಜೀನ್ಸ್/ ಕಪ್ಪು ಬಣ್ಣದ ಜೀನ್ಸ್
ನಿಮ್ಮ ಬಳಿ ಸಾಕಷ್ಟು ಜೀನ್ಸ್‍ಗಳಿದ್ರೂ ಫಿಟ್ ಆಗುವಂತಹ ಸ್ಕಿನ್ನಿ ಜೀನ್ಸ್ ಇದ್ರೆ ಅದೇ ನಿಮ್ಮ ಫೇವರೇಟ್ ಆಗಿರುತ್ತದೆ. ಹಾಗೇ ಕಪ್ಪು ಬಣ್ಣದ ಸ್ಕಿನ್ನಿ ಜೀನ್ಸ್ ನಿಮ್ಮ ವಾರ್ಡ್‍ರೋಬ್‍ನಲ್ಲಿ ಇರುವುದು ಅತ್ಯಗತ್ಯ. ಯಾವ ಪ್ಯಾಂಟ್ ಹಾಕೋದು ಅನ್ನೋ ಗೊಂದಲವಿದ್ದಾಗ ನಿಮ್ಮ ಫೇವರೇಟ್ ಪ್ಯಾಂಟನ್ನೇ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಕಪ್ಪು ಬಣ್ಣದ ಜೀನ್ಸ್ ಸಾಮಾನ್ಯವಾಗಿ ಎಲ್ಲಾ ಟಾಪ್‍ಗಳಿಗೂ ಹೊಂದಿಕೆಯಾಗುತ್ತದೆ.
8. ವಾಚ್
ಅಯ್ಯೋ ಈ ಕಾಲದಲ್ಲಿ ಮೊಬೈಲ್ ಇರಬೇಕಾದ್ರೆ ವಾಚ್‍ನಲ್ಲಿ ಟೈಂ ನೋಡೋರ್ಯಾರು ಅಂತ ಮೂಗು ಮುರೀಬೇಡಿ. ನೀವು ಕೈಗಡಿಯಾದರಲ್ಲಿ ಟೈಂ ನೋಡದಿದ್ರೂ ಪರವಾಗಿಲ್ಲ ಒಂದೊಳ್ಳೇ ವಾಚ್ ಕಟ್ಟಿದ್ರೆ ಅದರ ಗತ್ತೇ ಬೇರೆ. ದುಂಡಾದ ದೊಡ್ಡ ಡಯಲ್‍ನ ವಾಚ್‍ಗಳು ಈಗಿನ ಟ್ರೆಂಡ್. ಸ್ಟೀಲ್ ಕೇಸ್ ವಾಚ್ ಅಥವಾ ಬೆಲ್ಟ್ ವಾಚ್‍ಗಳಲ್ಲಿ ನಿಮಗೆ ಯಾವುದು ಇಷ್ಟವೋ ಅದನ್ನೇ ಆಯ್ಕೆ ಮಾಡಿಕೊಳ್ಳಿ.
Read More: 7 Stylish Looks To Copy This Week
9. ಬ್ಯಾಗ್/ ವಾಲೆಟ್
ಕಾಲೇಜಿಗೆ ಹೋಗೋವಾಗ ಬಳಸೋ ಬ್ಯಾಕ್‍ಪ್ಯಾಕ್ ಜೊತೆ ಟ್ರೆಂಡಿ ಬ್ಯಾಗ್‍ಗಳು ಕೂಡ ನಿಮ್ಮ ವಾರ್ಡ್‍ರೋಬ್‍ನಲ್ಲಿರಲಿ. ಗೆಳತಿಯರ ಜೊತೆ ಹೊರಗೆ ಹೋಗುವಾಗ ಅಥವಾ ಶಾಪಿಂಗ್ ಹೋಗುವಾಗ ಬಳಸೋಕೆ ಒಂದು ಸ್ಲಿಂಗ್ ಬ್ಯಾಗ್ ಇದ್ದರೆ ಸೂಕ್ತ. ಹಾಗೆ ಕೇವಲ ಕಾರ್ಡ್ ಹಾಗೂ ಹಣ ಮಾತ್ರ ತೆಗೆದುಕೊಂಡು ಹೋಗೋ ಸಂದರ್ಭಕ್ಕೆ ಒಂದೊಳ್ಳೆ ವಾಲೆಟ್(ಪರ್ಸ್) ಇರಲಿ.
10. ಕೂಲ್ ಸನ್ ಗ್ಲಾಸಸ್
ಫೋಟೋಗೆ ಪೋಸ್ ಕೊಡೋಕಾದ್ರೂ ಗೆಳೆಯರ ಬಳಿ ಇರೋ ಸನ್‍ಗ್ಲಾಸಸ್ ತೆಗೆದುಕೊಂಡು ಹಾಕೊಳ್ತಾರೆ. ಆದ್ರೆ ಬಿಸಿಲಿನಿಂದ ಕಣ್ಣುಗಳನ್ನ ರಕ್ಷಿಸಿಕೊಳ್ಳೋಕೆ ಸನ್‍ಗ್ಲಾಸಸ್ ಇರಲೇಬೇಕು. ಹೀಗಾಗಿ ಒಂದೊಳ್ಳೆ ಸನ್‍ಗ್ಲಾಸಸ್ ಇಟ್ಟುಕೊಳ್ಳಿ. ಹಾಗಂತ ಕಡಿಮೆ ಬೆಲೆಗೆ ಸಿಗೋ ಸನ್‍ಗ್ಲಾಸಸ್ ಖರೀದಿಸಬೇಡಿ. ಉತ್ತಮ ಗುಣಮಟ್ಟದ ಸನ್‍ಗ್ಲಾಸಸ್ ಇದ್ರೆ ಬಾಳಿಕೆಯೂ ಬರುತ್ತದೆ ಹಾಗೇ ನಿಮ್ಮ ಕಣ್ಣುಗಳೂ ಸೇಫ್.
ಇದು magzian.com ಸ್ಪಾನ್ಸರ್ ಸ್ಟೋರಿ. ಫೇಸ್‍ಬುಕ್ ಪೇಜ್ ಲೈಕ್ ಮಾಡಿ www.facebook.com/allmagzian