ಮಡಿಕೇರಿ: ಅಪ್ರಾಪ್ತೆಯನ್ನು ವಿವಸ್ತ್ರಗೊಳಿಸಿ 10ನೇ ಕ್ಲಾಸ್ ಬಾಲಕನೊಬ್ಬ ವಿಡಿಯೋ ಮಾಡಿದ್ದು, ಈಗ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೊಡಗಿನ ಸೋಮವಾರಪೇಟೆಯ ಮಾದ್ರೆಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಹೊಸಳ್ಳಿ ಗ್ರಾಮದ 10ನೇ ತರಗತಿ ಬಾಲಕನೊಬ್ಬ ಹಲವು ದಿನಗಳ ಹಿಂದೆ ಪಕ್ಕದ ಮನೆಯ 6ನೇ ತರಗತಿಯ ಅಪ್ರಾಪ್ತ ಬಾಲಕಿಯ ವಿಡಿಯೋ ಮಾಡಿದ್ದಾನೆ. ಭಾನುವಾರ ಬಾಲಕ ಮಾಡಿದ್ದ ವಿಡಿಯೋವನ್ನು ಪಕ್ಕದ ಮನೆಯೆ ಇನ್ನೊಬ್ಬ ಬಾಲಕ ನೋಡಿದ್ದಾನೆ. ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ಮೊದಲು ಪ್ರಕರಣ ದಾಖಲಿಸಲು ತಡ ಮಾಡಿದ್ದಾರೆ. ಇದರಿಂದ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದು, ನಂತರ ಈ ಪ್ರಕರಣ ಸಂಬಂಧ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರಸಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.