ಚಿಕ್ಕೋಡಿ: ಹತ್ತು ರೂಪಾಯಿ ನೀಡುವ ಆಮಿಷ ಒಡ್ಡಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಜಿಲ್ಲೆಯ ನಿಪ್ಪಾಣಿ (Nipani) ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಿಲ್ಲುತ್ತಿಲ್ಲ ಎನ್ನುವ ಕೂಗು ಹೆಚ್ಚಾಗುತ್ತಿದ್ದಂತೆ, ಗಡಿ ಜಿಲ್ಲೆ ಬೆಳಗಾವಿಯ ನಿಪ್ಪಾಣಿಯಲ್ಲಿ ಕಾಮುಕನೋರ್ವ ಅಪ್ರಾಪ್ತ 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಇದನ್ನೂ ಓದಿ: ಬೆಳಗಾವಿ ಎಸಿ ಕಚೇರಿಯನ್ನೇ ಜಪ್ತಿ ಮಾಡಿ ವಸ್ತುಗಳನ್ನು ಹೊತ್ತೊಯ್ದ ರೈತರು!
ಆಸಿಫ್ ಭಾಗವಾನ ಕೃತ್ಯ ಎಸಗಿದ ಆರೋಪಿ. ನಿಪ್ಪಾಣಿಯ ಬಾದಲ್‌ಪ್ಲಾಟ್‌ನಲ್ಲಿ (Badal Plot) ಈ ಘಟನೆ ನಡೆದಿದೆ.
ಕಾಮುಕ ಬಾಲಕಿಯ ಅಂಗಾಂಗ ಮುಟ್ಟಿದಾಗ ಪಾಲಕರ ಬಳಿ ವಿಷಯ ತಿಳಿಸಿದ್ದಾಳೆ. ಬಳಿಕ ಕಾಮುಕ ಆಸಿಫ್‌ನನ್ನು ಪಾಲಕರು ಥಳಿಸಿದ್ದಾರೆ. ಆ.16 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಬುಧವಾರ ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಮೀಡಿಯಾ, ಸಾರ್ವಜನಿಕರು ಬೈದ್ರೂ ನೀರಿನ ದರ ಏರಿಸಿಯೇ ಏರಿಸುತ್ತೇವೆ: ಡಿಕೆಶಿ