– ಪರೋಕ್ಷವಾಗಿ ಮೇಲ್ಜಾತಿಯನ್ನು ಉಲ್ಲೇಖಿಸಿ ಭಾಷಣ
– ಚುನಾವಣಾ ಪ್ರಚಾರಕ್ಕೆ ಸೇನೆಯನ್ನು ಎಳೆತಂದ ರಾಗಾ
ಪಾಟ್ನಾ: ಬಿಹಾರ ಚುನಾವಣೆಯ (Bihar Election) ಕಣ ರಂಗೇರುತ್ತಿದ್ದು ಈಗ ಪ್ರಚಾರ ಭಾಷಣದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಸೇನೆಯನ್ನು ಎಳೆದು ತಂದಿದ್ದಾರೆ. ದೇಶದ ಜನಸಂಖ್ಯೆಯಲ್ಲಿ 10% ಇರುವ ಜನರು ಸೇನೆಯನ್ನು ನಿಯಂತ್ರಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಮೇಲ್ಜಾತಿಯನ್ನು ಉಲ್ಲೇಖಿಸಿ ಭಾಷಣ ಮಾಡಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ
ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯ ಶೇ.10 ರಷ್ಟು ಇರುವ ಜನರು ಮಾತ್ರ ಕಾರ್ಪೊರೇಟ್ ವಲಯಗಳು, ಅಧಿಕಾರಶಾಹಿ ಮತ್ತು ನ್ಯಾಯಾಂಗದಲ್ಲಿ ಅವಕಾಶಗಳು ಸಿಗುತ್ತವೆ. ಸೇನೆಯೂ ಸಹ ಅವರ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಉಳಿದ ಶೇ.90 ರಷ್ಟು ಇರುವ ಹಿಂದುಳಿದ ವರ್ಗಗಳು, ದಲಿತರು, ಪರಿಶಿಷ್ಟ ಪಂಗಡಗಳು ಮತ್ತು ಇತರ ಅಲ್ಪಸಂಖ್ಯಾತರು ಎಲ್ಲಿಯೂ ಕಾಣುತ್ತಿಲ್ಲ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ ಯುವಜನತೆಗೆ ರೀಲ್ಸ್ ನಶೆ ಏರಿಸುತ್ತಿದ್ದಾರೆ: ರಾಹುಲ್ ಗಾಂಧಿ
Kutumba, Bihar: Lok Sabha LoP Rahul Gandhi says, “Make a list of India’s top 500 biggest companies, and you will not find anyone from the backward, extremely backward, Dalit, or Adivasi communities in it…. Only 10% of people from one section hold all the wealth — the bank money… pic.twitter.com/KVBvu6aitH
— IANS (@ians_india) November 4, 2025
ಎಷ್ಟು ದಲಿತರು, ಒಬಿಸಿಗಳು, ಮಹಿಳೆಯರು, ಅಲ್ಪಸಂಖ್ಯಾತರು ಇದ್ದಾರೆ ಎನ್ನುವುದರ ದತ್ತಾಂಶ ಬೇಕು. ಜಾತಿ ಜನಗಣತಿಯ (Caste Census) ಈ ಬೇಡಿಕೆಯ ಮೂಲಕ ನಾವು ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಶೇ. 90 ರಷ್ಟು ಜನರಿಗೆ ಭಾಗವಹಿಸುವ ಹಕ್ಕುಗಳಿಲ್ಲದಿದ್ದರೆ, ಸಂವಿಧಾನವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಲಾಲು, ರಾಹುಲ್ ಒಳನುಸುಳುಕೋರರನ್ನು ರಕ್ಷಿಸಲು ಬಯಸುತ್ತಾರೆ: ಅಮಿತ್ ಶಾ
ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ಜಾತಿ ವಿಚಾರವನ್ನು ಪ್ರಸ್ತಾಪ ಮಾಡುವುದು ಹೊಸದೆನಲ್ಲ. ಆದರೆ ಸೇನೆಯನ್ನು ಉಲ್ಲೇಖಿಸಿ ಮಾತನಾಡುತ್ತಿರುವುದು ಇದೇ ಮೊದಲು.
ಸೇನೆಯ ಬಗ್ಗೆ ಅವರು ಹುಬ್ಬೇರಿಸುವ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಆಗಸ್ಟ್‌ನಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ” ಚೀನೀ ಪಡೆಗಳು ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೈನಿಕರನ್ನು ಥಳಿಸಿವೆ” ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು.

