ಟೆಲ್ ಅವೀವ್: ಇಸ್ರೇಲ್ ಪಡೆಗಳು (Israel Forces) ಪಶ್ಚಿಮ ದಂಡೆಯಲ್ಲಿ ಕಾರ್ಯಾಚರಣೆ ನಡೆಸಿ 10 ಮಂದಿ ಪ್ಯಾಲೆಸ್ಟೀನಿಯನ್ನರನ್ನು (Palestinians) ಹತ್ಯೆ ಮಾಡಿದ್ದಾರೆ. ಇದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಎಂದು ಇಸ್ರೇಲ್ ಮಿಲಿಟರಿ ಪಡೆ ಹೇಳಿಕೊಂಡಿದೆ.
ಉತ್ತರದ ನಗರವಾದ ಜೆನಿನ್ನಲ್ಲಿ ಜನನಿಬಿಡ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಲಾಯಿತು. ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 20 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದಿವಾಳಿ ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ- ಆಹಾರ ಪದಾರ್ಥಗಳ ಬೆಲೆ ಮತ್ತಷ್ಟೂ ದುಬಾರಿ.!
Advertisement
Advertisement
“ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ತಂಡವನ್ನು ಬಂಧಿಸಲು, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಮಯದಲ್ಲಿ ಇಸ್ರೇಲಿ ಪಡೆಗಳು ಗುಂಡಿನ ದಾಳಿ ನಡೆಸಿತು. ಹಲವಾರು ಶತ್ರು ಹೋರಾಟಗಾರರನ್ನು ಹೊಡೆದುರುಳಿಸಿತು ಎಂದು ಮಿಲಿಟರಿ ತಿಳಿಸಿದೆ.
Advertisement
ಮಿಲಿಟರಿ ದಾಳಿಯ ಸಮಯದಲ್ಲಿ ಮನೆಗಳಿಗೆ ಹಾನಿಯಾಗಿದೆ. ಕಿಟಕಿ, ಬಾಗಿಲು, ಗೋಡೆಗಳು ಹಾನಿಗೊಳಗಾಗಿವೆ ಎಂದು ಜೆನಿನ್ ನಿವಾಸಿ ಉಮ್ ಯೂಸೆಫ್ ಅಲ್-ಸಾವಾಲ್ಮಿ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ – ಬಿಬಿಸಿಯನ್ನು ಸಮರ್ಥಿಸಿಕೊಂಡ ಅಮೆರಿಕ
Advertisement
ಇಸ್ರೇಲ್ ಸೇನಾಪಡೆಯು ಪ್ಯಾಲೆಸ್ಟೀನ್ ನಾಗರಿಕರು ಮತ್ತು ಹೋರಾಟಗಾರರು ಗುರಿಯಾಗಿ ದಾಳಿಗಳನ್ನು ನಡೆಸುತ್ತಿದೆ. ಹಲವು ವರ್ಷಗಳಿಂದ ಈ ರೀತಿಯ ದಾಳಿಗಳು ನಡೆಯುತ್ತಿವೆ. ಪ್ಯಾಲೆಸ್ಟೀನ್ ನಾಗರಿಕರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಇಸ್ರೇಲ್ ಸೇನಾಪಡೆ ಮೇಲೆ ಗಂಭೀರ ಆರೋಪ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k