ಕೊಪ್ಪಳ: ಕ್ರೂಸರ್ ಪಲ್ಟಿ ಹೊಡೆದ ಪರಿಣಾಮ ಹತ್ತು ಪ್ರಯಾಣಿಕರಿಗೆ ಗಾಯವಾಗಿ ಅದೃಷ್ಟವಶಾತ್ ಭಾರಿ ದುರಂತವೊಂದು ತಪ್ಪಿರೋ ಘಟನೆ ಕೊಪ್ಪಳ ದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ದದೇಗಲ್ ಬಳಿ ಕ್ರೂಸರ್ ಪಲ್ಟಿ ಹೊಡೆದಿದೆ. ಎದುರಿಗೆ ವಾಹನವೊಂದು ಬರುತ್ತಿದ್ದಂತೆ ಅದನ್ನ ತಪ್ಪಿಸಲು ಹೋಗಿ ಕ್ರೂಸರ್ ಚಾಲಕ ಬ್ರೇಕ್ ಹಾಕಿದಾಗ ರಸ್ತೆಬದಿ ಪಲ್ಟಿ ಹೊಡೆದು ಬಿದ್ದಿದೆ.
Advertisement
Advertisement
ಪರಿಣಾಮ 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ನಿಂಗಪ್ಪ, ಹನಮಂತ, ಶಿವಾನಂದ, ರೇಣವ್ವ ಮುಂತಾದವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಗಾಯಾಳುಗಳು ಸವದತ್ತಿ ತಾಲೂಕಿನ ಚುಳಕಿ ಗ್ರಾಮದಿಂದ ಗಂಗಾವತಿಗೆ ಮದುವೆಗೆಂದು ಹೊರಟಿದ್ದರು ಎಂದು ತಿಳಿದುಬಂದಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement