-ಮನಕಲುಕುತ್ತೆ ಮಂಗಳೂರಿನ ಹಸುಗೂಸಿನ ಕಥೆ
ಮಂಗಳೂರು: 10 ತಿಂಗಳ ಮಗುವಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂದನಿಗಾಗಿ ಅಮ್ಮನ ತ್ಯಾಗದ ಕಥೆ ಮನಕಲಕುತ್ತದೆ. ಮಗುವಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದರೂ, ಕಂದಮ್ಮನಿಗೆ ಎದೆ ಹಾಲು ನೀಡುವುದನ್ನ ತಾಯಿ ನಿಲ್ಲಿಸಿಲ್ಲ.
Advertisement
ಕೇರಳಕ್ಕೆ ಹೋದಾಗ ಮಗುವಿಗೆ ಕೊರೊನಾ ಸೋಂಕು ತಗುಲಿತ್ತು. ಐಸೋಲೇಷನ್ ವಾರ್ಡ್ ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಮ್ಮನ ಎದೆ ಹಾಲು ಕುಡಿದ್ರೆ ಮಾತ್ರ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಗುವಿಗೆ ಕೊರೊನಾ ಸೋಂಕು ತಗುಲಿದ್ದರೂ ತಾಯಿ ಎದೆ ಹಾಲು ಕುಡಿಸುತ್ತಿದ್ದಾರೆ. ವೈದ್ಯರ ತೀವ್ರ ನಿಗಾದ ಜೊತೆಗೆ ಮಗುವಿಗೆ ಅಮ್ಮನ ಆರೈಕೆಯೂ ಅಷ್ಟೇ ಅಗತ್ಯವಾಗಿದೆ. ಹಾಗಾಗಿ ಮಗುವಿಗೆ ಅಮ್ಮನೇ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.
Advertisement
Advertisement
ಅಮ್ಮನ ಆರೈಕೆ ಅಗತ್ಯ ಇರೋದರಿಂದ ತಾಯಿಯನ್ನು ಮಗುವಿನಿಂದ ವೈದ್ಯರು ಬೇರ್ಪಡಿಸಿಲ್ಲ. ಕಂದನ ಜೊತೆಗಿರಲು ಐಸೋಲೇಷನ್ ವಾರ್ಡ್ ನಲ್ಲಿ ತಾಯಿ ಮತ್ತು ಅಜ್ಜಿಗೆ ಅವಕಾಶ ಕಲ್ಪಿಸಲಾಗಿದೆ. ಮಗುವಿನ ಜೊತೆ ತಾಯಿ ಹಾಗೂ ಅಜ್ಜಿಯ ಆರೋಗ್ಯದ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಐಸೋಲೇಷನ್ ವಾರ್ಡ್ ತೆರಳುವಾಗ ಮಗುವಿನ ತಾಯಿ ಮತ್ತು ಅಜ್ಜಿ ವೈದ್ಯಕೀಯ ರಕ್ಷಣಾ ಸಾಮಾಗ್ರಿಗಳು ಅಂದರೆ ಪಿಪಿಇ ಕಿಟ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಮಗು ಹೆಚ್ಚು ತಾಯಿ ಜೊತೆ ಇರಲು ಬಯಸುತ್ತೆ. ತಾಯಿಯ ಬೆಚ್ಚಗೆ ಅಪ್ಪುಗೆಯಲ್ಲಿದ್ದಷ್ಟು ಮಗುವಿನ ಆರೋಗ್ಯ ಸ್ಥಿರವಾಗಿರುತ್ತೆ. ಹಾಗಾಗಿ ತಾಯಿಗೆ ವೈದ್ಯಾಧಿಕಾರಿಗಳು ಹೆಚ್ಚು ಷರತ್ತುಗಳನ್ನು ವಿಧಿಸಿಲ್ಲ.
Advertisement
ತಾಯಿ ಮತ್ತು ಅಜ್ಜಿಗೆ ಕೊರೊನಾ ಸೋಂಕು ತಗುಲಿಲ್ಲ. ನಿರಂತರವಾಗಿ ಮಗುವಿನ ಸಂಪರ್ಕದಲ್ಲಿ ಇರೋದರಿಂದ ಇಬ್ಬರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಮುದ್ದು ಕಂದಮ್ಮನಿಗಾಗಿ ತಾಯಿಯ ಈ ತ್ಯಾಗ ಮನ ಮಿಡಿಯುತ್ತದೆ.