ಮುಂಬೈ: 10ಕ್ಕೂ ಹೆಚ್ಚು ಸಚಿವರು ಮತ್ತು ಸುಮಾರು 20 ಶಾಸಕರು ಈವರೆಗೂ ಕೊರೊನಾ ವೈರಸ್ ಪಾಸಿಟಿವ್‍ಗೆ ಒಳಗಾಗಿದ್ದಾರೆ. ಕೊರೊನಾ ವಿರುದ್ಧ ಜನರನ್ನು ಸಜ್ಜುಗೊಳಿಸಬೇಕಾದ ಸಚಿವರು, ಶಾಸಕರಿಗೇ ಸೋಂಕು ತಗುಲಿರುವುದು ಆತಂಕಕಾರಿ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಸಚಿವರು, ಶಾಸಕರಲ್ಲಿ ಹೆಚ್ಚಿನವರಿಗೆ ಕೊರೊನಾ ಸೋಂಕು ದೃಢವಾಗಿದೆ. ರಾಜ್ಯಕ್ಕೆ ಸಾಂಕ್ರಾಮಿಕ ಕಾಯಿಲೆಗಳು ಬಂದಾಗ ಮುಂದೆ ನಿಂತು ಎದುರಿಸಬೇಕಿದ್ದ ಸಚಿವರಿಗೆ ಹಾಗೂ ಶಾಸಕರಿಗೆ ಕೊರೊನಾ ಸೋಂಕು ತಗುಲಿರೋದು ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ.
Advertisement
Nashik | A total of 10 ministers and over 20 MLA’s have tested positive for COVID19 in Maharashtra, says Deputy CM Ajit Pawar pic.twitter.com/kc2yXVxC4t
— ANI (@ANI) January 1, 2022
Advertisement
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತಷ್ಟು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯ ಮೇಲೆ ಸರ್ಕಾರ ಗಮನ ಹರಿಸಿದೆ. ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಮುಂದುವರಿದರೆ ಕಠಿಣ ನಿರ್ಬಂಧಗಳು ಜಾರಿಗೆ ಬರಲಿವೆ. ಈ ಕಠಿಣ ಕ್ರಮಗಳನ್ನು ತಪ್ಪಿಸಲು ಎಲ್ಲರೂ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜೆಸಿಬಿಗೆ ಬಲಿಯಾದ ಮೂರು ವರ್ಷದ ಮಗು
Advertisement
Advertisement
ಈವರೆಗೂ 10ಕ್ಕೂ ಹೆಚ್ಚು ಸಚಿವರು ಮತ್ತು 20ಕ್ಕೂ ಅಧಿಕ ಶಾಸಕರು ಕೊರೊನಾ ವೈರಸ್ ಪಾಸಿಟಿವ್‍ಗೆ ಒಳಪಟ್ಟಿದ್ದಾರೆ. ಪ್ರತಿಯೊಬ್ಬರೂ ಹೊಸ ವರ್ಷ, ಹುಟ್ಟು ಹಬ್ಬ ಹಾಗೂ ಇತರೆ ಸಂಭ್ರಮಾಚರಣೆಗಳಲ್ಲಿ ಭಾಗವಹಿಸಲು ಬಯಸುತ್ತಾರೆ. ಹೊಸ ತಳಿ ವೈರಸ್ ವೇಗವಾಗಿ ಹರಡುತ್ತಿದೆ ಮತ್ತು ಈ ಕಾರಣಕ್ಕಾಗಿ ಎಚ್ಚರಿಕೆ ಅಗತ್ಯ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು
ಮುಂಬೈನಲ್ಲಿ ನಿನ್ನೆ 5,631 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಅಭೆ ಸಮಾರಂಭಗಳಿಗೆ ಶೆ.50 ಮಂದಿಗೆ ಮಾತ್ರ ಅವಕಾಶ ನೀಡಿದ್ದಾರೆ.