– ತ್ವರಿತ ಪರೀಕ್ಷೆಯಿಂದ ಆಹಾರ ಗುಣಮಟ್ಟ, ಸುರಕ್ಷತೆ ಖಚಿತಪಡಿಸಿಕೊಳ್ಳಬಹುದು
ಬೆಂಗಳೂರು: ರಾಜ್ಯದಲ್ಲಿ ಕಬಾಬ್, ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ ವಿಧಿಸಿ ಆದೇಶ ಹೊರಡಿಸಿದ್ದ ಆರೋಗ್ಯ ಇಲಾಖೆ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ. ಇನ್ಮುಂದೆ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ ಗೊಂದಲ ಇರುವವರು ಇನ್ಮುಂದೆ ಆಹಾರ ಪರೀಕ್ಷೆಗೆ ಒಳಪಡಿಸಬಹುದು.
Advertisement
ಬೆಂಗಳೂರಲ್ಲಿ (Bengaluru) ಕಳೆದ ಎರಡು ತಿಂಗಳಿಂದ ಆಹಾರ ಹಾಗೂ ಆರೋಗ್ಯ ಇಲಾಖೆ ಅಸುರಕ್ಷಿತ ಆಹಾರಗಳ ಮೇಲೆ ಸಮರ ಸಾರಿದೆ. ಆಹಾರ ಮತ್ತು ಗುಣಮಟ್ಟ ಸುರಕ್ಷತಾ ಇಲಾಖೆ ಮೇಲಿಂದ ಮೇಲೆ ಬೆಂಗಳೂರಿನ ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸುತ್ತಿದೆ. ಕಾಟನ್ ಕ್ಯಾಂಡಿಯಿಂದ ಶುರುವಾದ ನಿಷೇಧದ ಪಟ್ಟಿ ಟೊಮೆಟೊ ಸಾಸ್ ತನಕ ಬಂದು ನಿಂತಿದೆ. ಇದೀಗ ಮತ್ತೊಂದು ಮಹತ್ವದ ಹೋರಾಟ ಮಾಡಲು ಆಹಾರ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿ ವಿಚಾರಣೆ; ಈಗ ಎ1 ಸಿದ್ದರಾಮಯ್ಯ ಸರದಿ – ಸದ್ಯದಲ್ಲೇ ಸಿಎಂಗೂ ನೋಟಿಸ್ ಸಾಧ್ಯತೆ
Advertisement
Advertisement
ಸಿಲಿಕಾನ್ ಸಿಟಿಯಲ್ಲಿ ಜನ ವೀಕೆಂಡ್ ಬಂದರೆ ಸಾಕು ಮಾಲ್‌ಗಳತ್ತ ಮುಖ ಮಾಡ್ತಾರೆ. ಮಾಲ್‌ಗಳ ಫುಡ್ ಕೋರ್ಟ್‌ಗಳಲ್ಲಿ ತಯಾರಾಗುವ ಆಹಾರವನ್ನು ಇನ್ಮುಂದೇ ಜನರೇ ಪರೀಕ್ಷಿಸಿ ನೋಡಬಹುದಾಗಿದೆ. ಆಹಾರದ ಗುಣಮಟ್ಟ, ಆಹಾರ ಕಲುಷಿತಗೊಂಡಿರುವ ಪ್ರಮಾಣ ಪರೀಕ್ಷೆ ಪತ್ತೆ ಮಾಡುವ ಪರೀಕ್ಷೆ ಕೇಂದ್ರವನ್ನು (Food Quality Testing Center) ಬೆಂಗಳೂರಿನ 10 ಮಾಲ್‌ಗಳಲ್ಲಿ ಸ್ಥಾಪನೆ ಮಾಡಿದೆ. ನಿನ್ನೆ ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿ ಆಹಾರ ತಪಾಸಣಾ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ಸ್ಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಆಹಾರಗಳಲ್ಲಿ ಹಾಕುವ ಪ್ರಾಥಮಿಕ ಆಹಾರಗಳ ಪರೀಕ್ಷಾ ವಿಧಾನವನ್ನ ಪರಿಶೀಲಿಸಿದರು.
Advertisement
ಬೆಂಗಳೂರಿನ 10 ಮಾಲ್‌ಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಆಹಾರ ಪದಾರ್ಥಗಳ ಕಲಬೆರಕೆ ಪತ್ತೆ ಹಚ್ಚುವ ಪರೀಕ್ಷಾ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಸಾರ್ವಜನಿಕರು ಮಾಲ್‌ಗಳಲ್ಲಿ ಪ್ರತಿ ದಿನ ಬಳಸುವ ಆಹಾರ ಪದಾರ್ಥಗಳಾದ ಕಾಫೀ, ಟೀ, ಬೇಳೆ ಕಾಳುಗಳು, ಸಕ್ಕರೆ, ಅಡುಗೆ ಎಣ್ಣೆ, ಟೀ-ಪುಡಿ, ಉಪ್ಪು, ಹಾಲು ಮತ್ತು ಹಾಲಿನ ಉತ್ಪನ್ನಗಳಾದ ತುಪ್ಪ, ಪನೀರ್, ಬೆಣ್ಣೆ ಹಾಗೂ ತರಕಾರಿ ಇತರೆ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ತ್ವರಿತ ಪರೀಕ್ಷೆಗಳಿಂದ ಖಚಿತಪಡಿಸಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಹಾಸನಾಂಬೆ ದೇವಿ ದರ್ಶನ – ಎರಡನೇ ದಿನವೂ ಭಕ್ತರ ದಂಡು
ಇದರಿಂದ ಜನರಿಗೆ ಆಹಾರ ಧಾನ್ಯಗಳ ಬಗ್ಗೆ ಅನುಮಾನ ಬಂದರೆ, ಈ ಟೆಸ್ಟಿಂಗ್ ಕೇಂದ್ರದಲ್ಲಿ ಬಗೆಹರಿಸಿಕೊಳ್ಳಬಹುದು. ಗುಣಮಟ್ಟವಲ್ಲದ ಆಹಾರ ಪದಾರ್ಥಗಳನ್ನು ಮಾರಿದರೆ ಆಹಾರ ಹಾಗೂ ಗುಣಮಟ್ಟ ಇಲಾಖೆಯೂ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.