ಬೆಂಗಳೂರು: ರಾಜ್ಯಾದ್ಯಂತ ಚುನಾವಣಾ ಅಧಿಕಾರಿಗಳ (Election Officers) ಕಾರ್ಯಾಚರಣೆ ಮುಂದುವರಿದಿದ್ದು, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮನೆಯ ಮುಂದಿನ ರಸ್ತೆಯಲ್ಲೇ 10 ಲಕ್ಷ ನಗದು ಹಣ ಪತ್ತೆಯಾಗಿದೆ.
ಗುರುವಾರ ತಡರಾತ್ರಿ ಬೆಂಗಳೂರಿನ (Bengluru) ಆರ್.ಟಿ ನಗರದ ಸಿಎಂ ಬೊಮ್ಮಾಯಿಯವರ ಮನೆ ಮುಂದಿನ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಬೆಂಝ್ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ದಾಖಲೆ ಇಲ್ಲದ 10 ಲಕ್ಷ ನಗದು ಹಣ ಪತ್ತೆಯಾಗಿದೆ. ಇದನ್ನೂ ಓದಿ: ಮೀನು ಮುಟ್ಟಿದ್ದೇನೆ ದೇಗುಲದ ಒಳಗೆ ಬರಬಹುದೇ?: ಹೊಸ್ತಿಲ ಹೊರಗೆ ನಿಂತು ರಾಹುಲ್ ಪ್ರಶ್ನೆ
ಕಾರಿನಲ್ಲಿದ್ದ ಇಬ್ಬರು ತಾವು ವ್ಯಾಪಾರಿಗಳು ಅಂತಾ ಪೊಲೀಸರ ಮುಂದೆ ಹೇಳಿದ್ದಾರೆ. ಆದರೆ ಹಣಕ್ಕೆ ಯಾವುದೇ ದಾಖಲೆ ಇಲ್ಲದೇ ಇರೋದು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಆರ್.ಟಿ ನಗರ ಪೊಲೀಸರು ಕಾರಿನಲ್ಲಿದ್ದ ಇಬ್ಬರನ್ನೂ ವಶಕ್ಕೆ ಪಡೆದು ಹಣದ ಮೂಲದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಣಾಂಗಣವಾದ ವರುಣಾ ಕಣ; ಸಿದ್ದರಾಮಯ್ಯನಹುಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ