ಹಾಸನ: ಬೈಕ್‍ನಲ್ಲಿ ಹಿಂಬಾಲಿಸಿದ ಖದೀಮರು ಪೆಟ್ರೋಲ್ ಬಂಕ್ ಮಾಲೀಕನಿಗೆ ಚಾಕು ತೋರಿಸಿ ಕಾರಿನಲ್ಲಿದ್ದ 10 ಲಕ್ಷ ರೂ.ಗಳನ್ನು ಕಿತ್ತುಕೊಂಡು ಪರಾರಿಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Advertisement
ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿ ಕದ್ಬಳ್ಳಿಯಲ್ಲಿ ಶ್ರೀ ಲಕ್ಷ್ಮಿರಂಗನಾಥಸ್ವಾಮಿ ಪೆಟ್ರೋಲ್ ಬಂಕ್ ಮಾಲೀಕರಾದ ಹೇಮ ಕುಮಾರ್ ಅವರು ಜೂನ್ 27ರಂದು ಬಂಕ್ ನಿಂದ 10 ಲಕ್ಷ ರೂಗಳನ್ನು ಸಂಗ್ರಹಿಸಿ, ತಮ್ಮ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಖದೀಮರು, ಹೇಮ ಕುಮಾರ್ ಅವರಿಗೆ ಚಾಕು ತೋರಿಸಿ ಕಾರಿನ ಬ್ಯಾಗ್ ನಲ್ಲಿದ್ದ 10 ಲಕ್ಷ ರೂ.ಗಳ ಕಿತ್ತು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪ್ರಧಾನಿ ವರದಿ ಕೇಳೋದ್ರಲ್ಲಿ ಏನಿಲ್ಲ, ಸುಪ್ರೀಂ ನ್ಯಾಯಾಧೀಶರಿಂದ ತನಿಖೆಯಾಗಲಿ: ಡಿಕೆಶಿ
Advertisement
Advertisement
10 ಲಕ್ಷ ರೂ. ಎಗರಿಸುವ ಮುನ್ನ ಎರಡು ಬೈಕ್‍ಗಳಲ್ಲಿ ತಂಡವಾಗಿ ಬಂದಂತಹ ಅಪರಿಚಿತರು ಹೇಮ ಕುಮಾರ್ ಕಾರಿನ ಟೈರ್ ಪಂಕ್ಜರ್ ಆಗಿದೆ ಎಂದು ಸನ್ನೆ ಮಾಡುವ ಮೂಲಕ ಅವರ ಗಮನವನ್ನು ಬೇರೆಡೆ ಸೆಳೆದಿದ್ದಾರೆ. ಇದಾದ ಬಳಿಕ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ ಮತ್ತೊಂದು ಬೈಕ್‍ನಲ್ಲಿ ಇದ್ದ ಇಬ್ಬರು ಸವಾರರು, ಹೇಮ ಕುಮಾರ್ ಅವರಿಗೆ ಚಾಕು ತೋರಿಸಿ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದೀಗ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಹೇಮ ಕುಮಾರ್ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: 40% ಕಮಿಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಗುತ್ತಿಗೆದಾರರ ಸಂಘದಿಂದ ದಾಖಲೆ ಕೇಳಿದ ಕೇಂದ್ರ ಗೃಹ ಸಚಿವಾಲಯ