ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ವಿಧಾನಸಭಾ ಕಲಾಪದ ವೇಳೆ ಬಿಜೆಪಿಯ ಶಾಸಕ ಅರಗ ಜ್ಞಾನೇಂದ್ರ ಅವರು ಸೋಮವಾರ ತೀರ್ಥಹಳ್ಳಿಯಲ್ಲಿ ಹಳ್ಳದಲ್ಲಿ ಕಾಲುಜಾರಿ ಬಿದ್ದು ಬಾಲಕಿ ಕೊಚ್ಚಿ ಹೋದ ಪ್ರಕರಣ ಸೇರಿದಂತೆ ಮಲೆನಾಡಿನ ಕೆಲ ಸಮಸ್ಯೆಗಳ ಕುರಿತು ಪ್ರಸ್ತಾಪ ಮಾಡಿದ್ರು. ಈ ವೇಳೆ ಮಲೆನಾಡಿನಲ್ಲಿ ಗ್ರಾಮ ವಾಸ್ತವ್ಯದ ಬಗ್ಗೆ ಸಿಎಂ ಘೋಷಣೆ ಮಾಡಿದ್ದಾರೆ.
https://twitter.com/CMofKarnataka/status/1016591344200921088
ಒಂದೆರಡು ದಿನ ಮಲೆನಾಡಿನಲ್ಲೇ ಉಳಿದುಕೊಂಡು ಸಮಸ್ಯೆ ಅರಿಯಲು ಯತ್ನಿಸುತ್ತೇನೆ. ಜೊತೆಗೆ ಇಂತಹ ಘಟನೆಗಳು ಮತ್ತೆ ಮರುಕಳಿಸಿದಂತೆ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿಗೆ ಆದೇಶಿಸಿದ್ದೇನೆ ಅಂತ ಅವರು ತಿಳಿಸಿದ್ದಾರೆ. ಇದೇ ವೇಳೆ ಸಿಎಂ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಆಗುಂಬೆ ಹೋಬಳಿ ವ್ಯಾಪ್ತಿಯ ಕೆಂದಾಳುಬೈಲು ಸಮೀಪದ ದೊಡ್ಲಿಮನೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆಶಿಕಾ (14) ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿದ್ದಳು. ಪಡಿತರ ಅಕ್ಕಿ ತಲೆಮೇಲಿಟ್ಟಿಕೊಂಡಿದ್ದ ಅಮ್ಮನಿಗೆ ಸರಿಸಮನಾಗಿ ಹೆಜ್ಜೆ ಹಾಕುತ್ತಿದ್ದ ಮಗಳು ನೋಡು ನೋಡುತ್ತಿದ್ದಂತೆ ಕುಸಿದ ಕಾಲು ಸಂಕದ ನೀರಿಗೆ ಬಿದ್ದು ಮೃತಪಟ್ಟಿದ್ದಳು.
ಮಲೆನಾಡಿನ ಸಮಸ್ಯೆಗಳನ್ನು ಅರಿಯಲು ಅಲ್ಲಿಯೇ ಗ್ರಾಮ ವಾಸ್ತವ್ಯ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ
ಇಂದು ಸದನದಲ್ಲಿ ಮಾತನಾಡಿದ ಅವರು ತೀರ್ಥಹಳ್ಳಿಯಲ್ಲಿ ಸೇತುವೆ ಕುಸಿದು ಬಾಲಕಿ ಕೊಚ್ಚಿಹೋದ ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದರಲ್ಲದೆ ಮಲೆನಾಡಿನ ಸಮಸ್ಯೆಗಳನ್ನು ಅರಿಯಲು ನಾನು ಮುಂದಾಗುತ್ತೇನೆ. pic.twitter.com/AyCaTRXPg0
— CM of Karnataka (@CMofKarnataka) July 10, 2018