ಚಿಕ್ಕಮಗಳೂರು: ಮಂಗಳವಾರ ಚಾರ್ಮಾಡಿ ಘಾಟ್ ಇಂದು ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ರಸ್ತೆಗೆ ಅಡ್ಡಲಾಗಿ ಗ್ಯಾಸ್ ಟ್ಯಾಂಕರ್ ಬಿದ್ದು 10 ಕಿ.ಮೀವರೆಗೂ ಟ್ರಾಫಿಕ್ ಜಾಮ್ ಆಗಿದೆ.
ರಸ್ತೆಗೆ ಅಡ್ಡಲಾಗಿ ಗ್ಯಾಸ್ ಟ್ಯಾಂಕರ್ ಬಿದ್ದ ಪರಿಣಾಮ ಕುದುರೆಮುಖ- ಕಾರ್ಕಳ – ಶೃಂಗೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Advertisement
Advertisement
ಶೃಂಗೇರಿಯ ಎಸ್‍ಕೆ ಬಾರ್ಡರ್ ನಿಂದ 10ಕಿ.ಮೀ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ರಾತ್ರಿಯಿಡೀ ಪ್ರಯಾಣಿಕರು ಪರದಾಡುವಂತಾಗಿತ್ತು. ಕುದುರೆಮುಖದಲ್ಲಿ ಐರಾವತ ಬಸ್‍ಗಳು ಸಾಲುಗಟ್ಟಿ ನಿಂತಲ್ಲೇ ನಿಂತಿದೆ. ಸದ್ಯ ಗ್ಯಾಸ್ ಟ್ಯಾಂಕರ್ ತೆರವಿಗೆ ಪೊಲೀಸರು ಪರದಾಡುತ್ತಿದ್ದಾರೆ.
Advertisement
ಕುದುರೆಮುಖ – ಕಾರ್ಕಳ -ಶೃಂಗೇರಿ – ಮಂಗಳೂರು ಮಾರ್ಗ ಕಲ್ಪಿಸೋ 169 ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಶೃಂಗೇರಿಯ ಗಡಿಯಲ್ಲೇ ವಾಹನಗಳು ತೆರಳದಂತೆ ತಡೆಯಲಾಗುತ್ತಿದೆ. ಸದ್ಯ ಸ್ಥಳಕ್ಕೆ ಕಾರ್ಕಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈಗ ಟ್ಯಾಂಕರ್ ಲಾರಿ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv