ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‍ಯ ತಿರುವಿನಲ್ಲಿ ಲಾರಿ ಪಲ್ಟಿಯಾದ ಪರಿಣಾಮ ಇಂದು ಬೆಳಿಗ್ಗೆ 10 ಗಂಟೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಲಾರಿ ಪಲ್ಟಿಯಾಗಿದ್ದರಿಂದ ಸುಮಾರು 10 ಕಿ.ಮೀ.ನಷ್ಟು ದೂರ ಸಾಲುಗಟ್ಟಿ ವಾಹನಗಳು ನಿಂತಿದ್ದು, ಚಾರ್ಮಾಡಿಯಿಂದ ಕೊಟ್ಟಿಗೆಹಾರದವರೆಗೂ ಟ್ರಾಫಿಕ್ ಜಾಮ್ ಆಗಿದೆ. ಲಾರಿ ಪಲ್ಟಿಯಾದ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದು, ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
Advertisement
Advertisement
ಚಾರ್ಮಾಡಿ ಘಾಟ್ ಚಿಕ್ಕಮಗಳೂರು-ಧರ್ಮಸ್ಥಳ ಸಂಪರ್ಕಿಸುವ ಏಕೈಕ ಮಾರ್ಗವಾಗಿದೆ. ಶಿರಾಡಿ ಘಾಟಿ, ಸಂಪಾಜೆ ಘಾಟಿ ಹೆದ್ದಾರಿ ಬಂದ್ ಆದ ಸಂದರ್ಭದಲ್ಲಿ ಚಾರ್ಮಾಡಿ ಘಾಟಿ ಮಾತ್ರ ಕರಾವಳಿ ಮತ್ತು ಬೆಂಗಳೂರಿನ ಸಂಪರ್ಕ ರಸ್ತೆಯಾಗಿ ಉಳಿದಿತ್ತು. ಇದರಿಂದ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸಿದ ಕಾರಣ ಘಾಟಿ ರಸ್ತೆ ಸಂಪೂರ್ಣ ಹಾಳಾಗಿದೆ. ಅಪಾಯಕಾರಿ ತಿರುವುಗಳಲ್ಲಿ ರಸ್ತೆ ಡಾಂಬರು ಕಿತ್ತು ಹೋಗಿ ಗುಂಡಿಗಳು ಬಿದ್ದಿದೆ. ಆದ್ದರಿಂದ ಈ ಮಾರ್ಗದಲ್ಲಿ ವಾಹನಗಳು ಪಲ್ಟಿಯಾಗುತ್ತಲೇ ಇರುತ್ತವೆ.
Advertisement
Advertisement
ಲಘು-ಘನ ಎನ್ನದೇ ಎಲ್ಲಾ ವಾಹನಗಳು ಇದೇ ಮಾರ್ಗವಾಗಿ ಬೆಂಗಳೂರು ಸೇರುತ್ತಿದ್ದವು. ಹೀಗಾಗಿ ಹಲವು ದಿನಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಹಾಗೂ ವಾಹನ ಸವಾರರು ನರಕಯಾತನೆ ಅನುಭವಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv