ಆಸ್ಟ್ರೀಯ ಶಾಲೆಯ ಒಳಗಡೆ ಮನ ಬಂದಂತೆ ಗುಂಡಿನ ದಾಳಿಗೆ 10 ಬಲಿ

Public TV
1 Min Read
10 Killed In Mass Shooting At Austrian School Shooter Dies By Suicide

ವಿಯೆನ್ನಾ: ಶಾಲೆಯ (School) ಒಳಗಡೆ ನಡೆದ ಗುಂಡಿನ ದಾಳಿಯಲ್ಲಿ 10 ಮಂದಿ ಮೃತಪಟ್ಟ ಘಟನೆ ಆಸ್ಟ್ರೀಯಾದ (Austria) ಗ್ರಾಜ್‌ ನಗರದಲ್ಲಿ ನಡೆದಿದೆ.

ಆಸ್ಟ್ರೀಯಾ ಕಾಲಮಾನ ಮಂಗಳವಾರ ಬೆಳಗ್ಗೆ 10 ಗಂಟೆಗೆ ಈ ಘಟನೆ ನಡೆದಿದೆ. ಗುಂಡಿನ ದಾಳಿ ನಡೆಸಿದ ಬಳಿಕ ದಾಳಿಕೋರ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದುರಂತದಲ್ಲಿ 8 ವಿದ್ಯಾರ್ಥಿಗಳು ಮತ್ತು ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಒಬ್ಬನೇ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸುಮಾರು 3 ಲಕ್ಷ ಜನರು ನೆಲೆಸಿರುವ ಗ್ರಾಜ್ ನಗರವು ರಾಜಧಾನಿ ವಿಯೆನ್ನಾದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ. ಇದು ಆಸ್ಟ್ರಿಯಾದ ಎರಡನೇ ಅತಿದೊಡ್ಡ ನಗರವಾಗಿದೆ. ಇದನ್ನೂ ಓದಿ: ಕೈಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡೀಪಾರು

ಆಸ್ಟ್ರಿಯಾವು ಕಟ್ಟುನಿಟ್ಟಾದ ಬಂದೂಕು ನಿಯಂತ್ರಣ ಕಾನೂನುಗಳನ್ನು ಹೊಂದಿದೆ. ದೇಶದಲ್ಲಿ ಬಂದೂಕುಗಳ ಮಾಲೀಕತ್ವವನ್ನು ಪಡೆಯಬೇಕಾದರೆ ಪರವಾನಗಿ ಹೊಂದುವುದು ಅಗತ್ಯವಾಗಿದೆ. ಅಷ್ಟೇ ಅಲ್ಲದೇ ವ್ಯಕ್ತಿಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್‌ ಆಗಬೇಕಾಗುತ್ತದೆ. ಇದನ್ನೂ ಓದಿ: KRSನಲ್ಲಿ ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್‌ ಮಾಡೇ ಮಾಡ್ತೀವಿ – ಗಣಿಗ ರವಿಕುಮಾರ್

ಮೆಷಿನ್ ಗನ್‌ಗಳು, ಹೆಚ್ಚಿನ ಸಾಮರ್ಥ್ಯದ ಮ್ಯಾಗಜೀನ್‌ಗಳು, ಕ್ಷಿಪ್ರ-ಗುಂಡು ಬಂದೂಕುಗಳ ಬಳಕೆಗೆ ನಿರ್ಬಂಧವಿದೆ. ಅಪ್ರಾಪ್ತ ವಯಸ್ಕರು ಬಂದೂಕು ಹೊಂದುವಂತಿಲ್ಲ. ಯುರೋಪಿಯನ್ ಅಲ್ಲದ ನಿವಾಸಿಗಳು ಆಸ್ಟ್ರಿಯಾಕ್ಕೆ ಬಂದೂಕುಗಳನ್ನು ತರಲು ವಿಶೇಷ ಪರವಾನಗಿ ಪಡೆಯಬೇಕಾಗುತ್ತದೆ.

ಆಸ್ಟ್ರೀಯಾದ ಒಟ್ಟು ಜನಸಂಖ್ಯೆ 91.3 ಲಕ್ಷ ಆಗಿದ್ದು ಸ್ಮಾಲ್ ಆರ್ಮ್ಸ್ ಸರ್ವೆ ಪ್ರಕಾರ ಆಸ್ಟ್ರೀಯಾದ 100 ಮಂದಿಯಲ್ಲಿ ಅಂದಾಜು 30 ಮಂದಿ ಬಂದೂಕು ಪರವಾನಗಿ ಹೊಂದಿದ್ದಾರೆ.

Share This Article