ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದ (California) ಏಷ್ಯಾದ ನಗರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ (Shooting) ಹತ್ತು ಜನರು ಮೃತಪಟ್ಟಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.
ಮಾಂಟೆರಿ ಪಾರ್ಕ್‌ನಲ್ಲಿ ಚೀನೀಯರು ಹೊಸ ವರ್ಷದ ಪಾರ್ಟಿಯಲ್ಲಿ ಸಂಭ್ರಮಿಸುತ್ತಿದ್ದಾಗ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶೂಟೌಟ್‌ನಲ್ಲಿ ಗಾಯಗೊಂಡವರನ್ನು ತುರ್ತು ಸಿಬ್ಬಂದಿ ಸ್ಟ್ರೆಚರ್‌ಗಳ ಮೂಲಕ ಅಂಬುಲೆನ್ಸ್‌ಗೆ ಹಾಕಿಕೊಂಡು ಕರೆದೊಯ್ಯುತ್ತಿರುವ ದೃಶ್ಯಗಳು ವೀಡಿಯೋಗಳಲ್ಲಿವೆ. ಇದನ್ನೂ ಓದಿ: ಅಮೆರಿಕ ಮಿಲಿಟರಿ ಪಡೆಯಿಂದ ವೈಮಾನಿಕ ದಾಳಿ – 30 ಉಗ್ರರ ಹತ್ಯೆ
Advertisement
Advertisement
ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ಎರಡು ದಿನಗಳ ʼಚಂದ್ರನ ಹೊಸ ವರ್ಷʼದ ಹಬ್ಬಕ್ಕಾಗಿ ಹತ್ತಾರು ಸಾವಿರ ಜನರು ಮುಂಜಾನೆಯೇ ಜಮಾಯಿಸಿದ್ದರು. ರಾತ್ರಿ ಪಾರ್ಟಿ ವೇಳೆ ಬಂದೂಕುಧಾರಿ ಗುಂಡು ಹಾರಿಸಿದ್ದು, ಹಲವರು ಸಾವಿಗೀಡಾಗಿದ್ದಾರೆ.
Advertisement
“ಮಾಂಟೆರಿ ಪಾರ್ಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಮ್ಮ ಸಂತಾಪಗಳು” ಎಂದು ಲಾಸ್ ಏಂಜಲೀಸ್ ಸಿಟಿ ಕಂಟ್ರೋಲರ್ ಕೆನ್ನೆತ್ ಮೆಜಿಯಾ ಟ್ವೀಟ್‌ನಲ್ಲಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಸೀಟ್‌ಬೆಲ್ಟ್ ಹಾಕದ ರಿಷಿ ಸುನಾಕ್‌ಗೆ ದಂಡ
Advertisement
ಅಮೆರಿಕದಲ್ಲಿ ಗನ್ ಹಿಂಸಾಚಾರವು ದೊಡ್ಡ ಸಮಸ್ಯೆಯಾಗಿದೆ. ಕಳೆದ ವರ್ಷ 647 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k