ಲ್ಯಾಂಡಿಂಗ್ ವೇಳೆ ಲಘು ವಿಮಾನ ಪತನ – 10 ಮಂದಿ ದುರ್ಮರಣ

Public TV
2 Min Read
malaysia plane crash

ಕೌಲಾಲಂಪುರ: ಮಲೇಷ್ಯಾದ (Malaysia) ಸೆಂಟ್ರಲ್ ಸೆಲಂಗೋರ್ ರಾಜ್ಯದಲ್ಲಿ ಲಘು ವಿಮಾನವೊಂದು (Light Plane) ಲ್ಯಾಂಡಿಂಗ್ ಮಾಡುವ ವೇಳೆ ಕಾರು ಮತ್ತು ಮೋಟರ್ ಸೈಕಲ್‌ಗೆ ಡಿಕ್ಕಿ ಹೊಡೆದು ಪತನಗೊಂಡಿದ್ದು, ವಿಮಾನದಲ್ಲಿದ್ದ 8 ಜನ ಹಾಗೂ ಇಬ್ಬರು ಚಾಲಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ವಿಮಾನ ಅಪಘಾತದಲ್ಲಿ (Plane Crash) ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, ಒಬ್ಬರು ಮೋಟಾರ್ ಸೈಕಲ್ ಚಾಲಕ, ಇನ್ನೊಬ್ಬರು ಕಾರು ಚಾಲಕ ಮತ್ತು ವಿಮಾನದಲ್ಲಿದ್ದ 8 ಜನ ಸೇರಿದಂತೆ ಒಟ್ಟು 10 ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 271 ಪ್ರಯಾಣಿಕರಿದ್ದ ವಿಮಾನದಲ್ಲಿ ಪೈಲಟ್‌ಗೆ ಹೃದಯಾಘಾತ – ತುರ್ತು ಭೂಸ್ಪರ್ಶ ಮಾಡಿದ ಸಹ ಪೈಲಟ್‌ಗಳು

ಮಲೇಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ (Civil Aviation Authority) ನೀಡಿರುವ ಹೇಳಿಕೆಯಲ್ಲಿ, ವಿಮಾನ ಪತನಗೊಂಡ ಸಂದರ್ಭ 6 ಮಂದಿ ಪ್ರಯಾಣಿಕರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ತಿಳಿಸಿದೆ. ಅಲ್ಲದೇ ಘಟನೆಯ ಬಳಿಕ ಸುರಕ್ಷತಾ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಟಿಕ್‌ಟಾಕ್ ಬ್ಯಾನ್ ಮಾಡಿದ ನ್ಯೂಯಾರ್ಕ್ ಆಡಳಿತ

ವಿಮಾನವು ಏರ್ ಟ್ರಾಫಿಕ್ ಕಂಟ್ರೋಲ್ ಟವರ್‌ನೊಂದಿಗೆ ಸಂಪರ್ಕವನ್ನು ಕಡಿದುಕೊಂಡು ಹೆದ್ದಾರಿಯಲ್ಲಿ ಮೋಟಾರ್ ಬೈಕ್ ಮತ್ತು ಕಾರಿಗೆ ಡಿಕ್ಕಿ ಹೊಡೆದಿದೆ. ನಾಗರಿಕ ವಿಮಾನಯಾನ ಪ್ರಾಧಿಕಾರ ಈ ಕುರಿತು ಪ್ರತಿಕ್ರಿಯಿಸಿದ್ದು, ವಿಮಾನ ಲಂಕಾವಿಯಿಂದ ಹೊರಟು ರಾಜಧಾನಿ ಕೌಲಾಲಂಪುರ ಬಳಿಯಿರುವ ಸೆಲಂಗೋರ್‌ನ ಸುಲ್ತಾನ್ ಅಬ್ದುಲ್ ಅಜೀಜ್ ಷಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎಂದು ತಿಳಿಸಿದೆ. ಇದನ್ನೂ ಓದಿ: ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಜಡ್ಜ್

ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೊರಾಜ್‌ಮನ್ ಮಹಮೂದ್ ಮಾತನಾಡಿ, ವಿಮಾನವು ಸುಬಾಂಗ್ ಏರ್ ಟ್ರಾಫಿಕ್ ಕಂಟ್ರೋಲ್ ಟವರ್‌ನೊಂದಿಗೆ ಮಧ್ಯಾಹ್ನ 2:47ಕ್ಕೆ ಮೊದಲ ಸಂಪರ್ಕವನ್ನು ಸಾಧಿಸಿದ್ದು, 2:48ಕ್ಕೆ ಲ್ಯಾಂಡಿಂಗ್ ಕ್ಲಿಯರೆನ್ಸ್ ನೀಡಲಾಗಿತ್ತು ಎಂದರು. ಇದನ್ನೂ ಓದಿ: ಪಾಕ್, ಚೀನಾಗೆ ಠಕ್ಕರ್ ಕೊಡಲು ಅತ್ಯಾಧುನಿಕ ಡ್ರೋಣ್ ನಿಯೋಜನೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article