ಕೊಲಂಬೋ: ಸಮುದ್ರದ ಗಡಿ ದಾಟಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಶ್ರೀಲಂಕಾ ನೌಕಾಪಡೆಯಿಂದ (Sri Lankan Navy) ಬಂಧಿತರಾದ 10 ಮೀನುಗಾರರ ಮೇಲೆ ತನ್ನ ನೌಕಪಡೆಯ ನಾವಿಕನ ಹತ್ಯೆ ಆರೋಪವನ್ನು ಶ್ರೀಲಂಕಾ ಹೊರಿಸಿದೆ.
ಇತ್ತೀಚೆಗೆ 10 ಭಾರತೀಯ ಮೀನುಗಾರರು ಅಕ್ರಮವಾಗಿ ಶ್ರೀಲಂಕಾದ ಗಡಿ ದಾಟಿ ಮೀನುಗಾರಿಕೆ ನಡೆಸುತ್ತಿದ್ದರು. ಈ ಕಾರ್ಯಾಚರಣೆ ವೇಳೆ ಶ್ರೀಲಂಕಾ ನೌಕಾಪಡೆಯ ನಾವಿಕ ಹಲ್ಲೆಗೊಳಗಾಗಿದ್ದ. ಬಳಿಕ ಆತ ಸಾವಿಗೀಡಾಗಿದ್ದ ಎಂದು ಶ್ರೀಲಂಕಾ ಆರೋಪಿಸಿದೆ. ಈ ಹತ್ಯೆ ಆರೋಪವನ್ನು 10 ಮೀನುಗಾರರ ವಿರುದ್ಧ ಹೊರಿಸಲಾಗುವುದು ಎಂದು ಶ್ರೀಲಂಕಾದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜುಲೈ 8 ರಂದು ರಷ್ಯಾಗೆ ಮೋದಿ – ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆ
ಮೀನುಗಾರರಿಗೆ ಸೇರಿದ ಬೋಟ್ ಅನ್ನು ಕಂಕಸಂತುರೈ ಬಂದರಿನಲ್ಲಿ ಇರಿಸಲಾಗಿದೆ. ಮೀನುಗಾರರನ್ನು ಕಾನೂನು ಕ್ರಮಕ್ಕಾಗಿ ಮೈಲಾಡಿ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ. ಮೀನುಗಾರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕೋರಿ ಕಂಕಸಂತುರೈ ಪೊಲೀಸರು ಜಾಫ್ನಾದಲ್ಲಿರುವ ಮಲ್ಲಕಂ ಕೋರ್ಟ್‍ಗೆ ರಿಪೋರ್ಟ್ ಸಲ್ಲಿಸಿದ್ದಾರೆ.
10 ಭಾರತೀಯ ಅಕ್ರಮ ಮೀನುಗಾರಿಕೆ, ಕಾರ್ಯಾಚರಣೆಯ ವೇಳೆ ನೌಕಾಪಡೆಯ ವ್ಯಕ್ತಿಯ ಹತ್ಯೆ ಮತ್ತು ನೌಕಾ ಪಡೆಯ ಆಸ್ತಿಗೆ ಹಾನಿ ಮಾಡಿದ ಆರೋಪಗಳನ್ನು ಅವರು ಎದುರಿಸುತ್ತಾರೆ ಎಂದು ರಿಪೋರ್ಟ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ದೇಶಗಳ ಮೀನುಗಾರರು ಅಜಾಗರೂಕತೆಯಿಂದ ಜಲಪ್ರದೇಶಗಳಿಗೆ ನುಗ್ಗಿದ ಕಾರಣಕ್ಕಾಗಿ ಆಗಾಗ್ಗೆ ಬಂಧಿಸಲ್ಪಡುತ್ತಾರೆ. ಶ್ರೀಲಂಕಾ ನೌಕಾಪಡೆಯು ಈ ವರ್ಷ ಇದುವರೆಗೆ ದೇಶದ ನೀರಿನಲ್ಲಿ ಅಕ್ರಮ ಮೀನುಗಾರಿಕೆಗಾಗಿ 200 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಂಧಿಸಿದೆ ಮತ್ತು 27 ಬೋಟ್‌ಗಳನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ಶ್ರೀಲಂಕಾ ನೌಕಪಡೆಯಿಂದ ಭಾರತದ 22 ಮೀನುಗಾರರ ಅರೆಸ್ಟ್