ಬೆಂಗಳೂರು: ಮೆಡಿಕಲ್ ಓದೋ ಕನಸು ಕಾಣ್ತಿರೋ ಮಕ್ಕಳಿಗೆ ಸಿದ್ದರಾಮಯ್ಯ ಸರ್ಕಾರ ದುಬಾರಿ ಶುಲ್ಕದ ಭಾಗ್ಯ ನೀಡಿದೆ. ಮೆಡಿಕಲ್ ಕಾಲೇಜುಗಳ ಲಾಬಿಗೆ ಮತ್ತೊಮ್ಮೆ ಸರ್ಕಾರ ತಲೆ ಬಾಗಿದೆ.ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‍ಗಳ ಶುಲ್ಕವನ್ನ ಶೇಕಡಾ 10 ರಷ್ಟು ಹೆಚ್ಚಳ ಮಾಡುವ ಮೂಲಕ ಬಡ ವಿದ್ಯಾರ್ಥಿಗಳ ಪಾಲಿಗೆ ವೈದ್ಯಕೀಯ ಕೋರ್ಸನ್ನ ಗಗನ ಕುಸುಮವಾಗಿಸಿದೆ.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಬುಧವಾರ ನಡೆದ ಕಾಲೇಜುಗಳ ಆಡಳಿತ ಮಂಡಳಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಕಳೆದ ವರ್ಷ ಶೇ.20ರಷ್ಟು ಶುಲ್ಕ ಹೆಚ್ಚಳ ಮಾಡಿದ್ದ ಸರ್ಕಾರ ಈ ವರ್ಷ ಮತ್ತೆ ಶೇ.10 ಶುಲ್ಕ ಹೆಚ್ಚಿಸಿದೆ. ಇದ್ರಿಂದ, 7 ಸಾವಿರ ರೂಪಾಯಿ ಶುಲ್ಕ ಹೆಚ್ಚಾಗಿದ್ದು, ಪೋಷಕರು-ವಿದ್ಯಾರ್ಥಿಗಳಿಗೆ ಮತ್ತಷ್ಟು ಹೊರೆಯಾಗಲಿದೆ.
Advertisement
ಯಾವ ವರ್ಷ ಎಷ್ಟು ಶುಲ್ಕ?
Advertisement
Advertisement