ನವದೆಹಲಿ: 2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಇದೆ ಮೊದಲ ಬಾರಿಗೆ ಕ್ಸಿಯೋಮಿಗೆ ಸ್ಥಾನ ಸಿಕ್ಕಿದೆ.
ಮೊಬೈಲ್ ಮಾರುಕಟ್ಟೆಯ ಬಗ್ಗೆ ಕೌಂಟರ್ ಪಾಯಿಂಟ್ ಅಧ್ಯಯನ ನಡೆಸಿದ್ದು, ಆಪಲ್ ಐಫೋನ್ ಎಕ್ಸ್ ಫೋನಿಗೆ ಮೊದಲ ಸ್ಥಾನ ಸಿಕ್ಕಿದರೆ ಕ್ಸಿಯೋಮಿ ರೆಡ್‍ಮೀ 5ಎ ಮೂರನೇ ಸ್ಥಾನ, ಸ್ಯಾಮ್ ಸಂಗ್ ಗೆಲಾಕ್ಸಿ ಎಸ್9ಗೆ 5ನೇ ಸ್ಥಾನ ಸಿಕ್ಕಿದೆ. ಪಟ್ಟಿಯಲ್ಲಿ ಆಪಲ್, ಸ್ಯಾಮ್ ಸಂಗ್, ಕ್ಸಿಯೋಮಿ, ಒಪ್ಪೊ ಕಂಪೆನಿಯ ಫೋನ್‍ಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
Advertisement
ಟಾಪ್ 10 ಫೋನ್ ಗಳ ಪಟ್ಟಿ
Advertisement
1.ಆಪಲ್ ಐ ಫೋನ್ ಎಕ್ಸ್:
Advertisement
Advertisement
ಆಪಲ್ ಐ ಫೋನ್ ಎಕ್ಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಶೇ3.5 ಪಾಲನ್ನು ಪಡೆಯುವುದರ ಮೂಲಕ ಮೊದಲ ಸ್ಥಾನದಲ್ಲಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 76,488 ರೂ. ಇದ್ದರೆ 256 ಜಿಬಿ 92,990 ರೂ. ಇದೆ.
2.ಆಪಲ್ ಐ ಫೋನ್ 8 ಪ್ಲಸ್
ಮಾರುಕಟ್ಟೆಯಲ್ಲಿ ಶೇ2.3 ಪಾಲನ್ನು ಪಡೆಯುವುದರ ಮೂಲಕ ಎರಡನೇ ಸ್ಥಾನದಲ್ಲಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 69,990 ರೂ. ಇದ್ದರೆ 256 ಜಿಬಿ 78,999 ರೂ.
3.ಕ್ಸಿಯೋಮಿ ರೆಡ್ ಮಿ 5ಎ
2017 ನವೆಂಬರ್ ನಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿದ್ದು ಮೂರನೇ ಸ್ಥಾನದಲ್ಲಿದೆ. ಶೇ1.8 ಮಾರುಕಟ್ಟೆ ಪಾಲನ್ನು ಹೊಂದಿದೆ. 16 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 5,999 ರೂ. ಇದೆ.
4. ಒಪ್ಪೊ ಎ83
ಒಪ್ಪೊ ಎ83 ಶೇ.1.8 ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ನಾಲ್ಕನೇಯ ಸ್ಥಾನವನ್ನು ಪಡೆದುಕೊಂಡಿದೆ. ಶೇ1.8 ಮಾರುಕಟ್ಟೆ ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 15,990 ರೂ. ಇದೆ.
5.ಸ್ಯಾಮ್ ಸಂಗ್ ಗೆಲಾಕ್ಸಿ ಎಸ್ 9
ಶೇ1.6 ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ 5ನೇ ಸ್ಥಾನವನ್ನು ಪಡೆದುಕೊಂಡಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 55,099 ರೂ. ಬೆಲೆ ನಿಗದಿಯಾಗಿದೆ.
6.ಸ್ಯಾಮ್ ಸಂಗ್ ಎಸ್ 9 ಪ್ಲಸ್
ಈ ವರ್ಷ ಮಾರ್ಚ್ ನಲ್ಲಿ ಬಿಡುಗಡೆಗೊಂಡ ಸ್ಯಾಮ್ ಸಂಗ್ ಎಸ್ 9 ಪ್ಲಸ್ ಫೋನಿಗೆ 6 ನೇ ಸ್ಥಾನ ಸಿಕ್ಕಿದ್ದು, ಶೇ1.6 ಮಾರುಕಟ್ಟೆ ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 64,900 ರೂ. ಬೆಲೆಯಿದೆ.
7.ಐಪೋನ್ 7
2016 ಸೆಪ್ಟಂಬರ್ ನಲ್ಲಿ ಬಿಡುಗಡೆಗೊಂಡಿದ್ದ ಆಪಲ್ ಐಫೋನ್ 7 ಏಳನೇ ಸ್ಥಾನದಲ್ಲಿದೆ. ಮಾರುಕಟ್ಟೆಯ ಶೇ1.6 ಪಾಲನ್ನು ಹೊಂದಿದೆ. 32 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 41,499 ರೂ. ಬೆಲೆಯಿದೆ.
8.ಆಪಲ್ ಐ ಫೋನ್ 8
ಐ ಫೋನ್ 8 ಎಂಟನೇ ಸ್ಥಾನದಲ್ಲಿದೆ. ಮಾರುಕಟ್ಟೆಯ ಶೇ1.4 ಪಾಲನ್ನು ಹೊಂದಿದೆ. 53,749 ರೂ. ಬೆಲೆಯಲ್ಲಿ 64 ಜಿಬಿ ಆಂತರಿಕ ಮೆಮೊರಿಯ ಫೋನ್ ಖರೀದಿಸಬಹುದು.
9.ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ7 ಪ್ರೊ
ಒಂಭತ್ತನೇ ಸ್ಥಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ7 ಪ್ರೊ ಇದೆ. ಮಾರುಕಟ್ಟೆಯ ಶೇ1.4 ಪಾಲನ್ನು ಹೊಂದಿದೆ. 64 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 18,900 ರೂ. ಬೆಲೆಯಿದೆ.
10. ಆಪಲ್ ಐ ಫೋನ್ 6
ಆಪಲ್ ಐ ಫೋನ್ 6 ಹತ್ತನೇ ಸ್ಥಾನವನ್ನು ಪಡೆದುಕೊಂಡಿದೆ. 2014 ರಲ್ಲಿ ಬಿಡುಗಡೆಗೊಂಡ ಸ್ಮಾರ್ಟ್ ಫೋನ್ ಶೇ.1.2 ಮಾರುಕಟ್ಟೆಯಲ್ಲಿ ಪಾಲನ್ನು ಹೊಂದಿದೆ. 32 ಜಿಬಿ ಆಂತರಿಕ ಮೆಮೊರಿ ಫೋನಿನ ಬೆಲೆ 23,999 ರೂ. ಬೆಲೆಯಿದೆ.